ಮುಖ್ಯಮಂತ್ರಿಯಾಗುವ ಏಕೈಕ ಉದ್ದೇಶದಿಂದ ಬಿಎಲ್ ಸಂತೋಷ್ ಗುಂಪುಗಾರಿಕೆ ನಡೆಸಿ 72 ಹೊಸಮುಖಗಳಿಗೆ ಟಿಕೆಟ್ ಕೊಡಿಸಿದರು: ಎಂಪಿ ರೇಣುಕಾಚಾರ್ಯ

ಜಗದೀಶ್ ಶೆಟ್ಟರ್ ಪಕ್ಷಕ್ಕಾಗಿ ಜೀವತೇದವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು, ಶೆಟ್ಟರ್ ಶಾಸಕನಾಗಿ, ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು-ಅಂಥವರಿಗೆ ಟಿಕೆಟ್ ನೀಡಲಿಲ್ಲ, ಕುರುಬ ಜನಾಂಗದ ದೊಡ್ಡ ಪ್ರತಿನಿಧಿಯಾಗಿದ್ದ ಕೆಎಸ್ ಈಶ್ವರಪ್ಪ, ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಮೊದಲಾದವರಿಗೆ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು ಎಂದು ರೇಣುಕಾಚಾರ್ಯ ಹೇಳಿದರು.

ಮುಖ್ಯಮಂತ್ರಿಯಾಗುವ ಏಕೈಕ ಉದ್ದೇಶದಿಂದ ಬಿಎಲ್ ಸಂತೋಷ್ ಗುಂಪುಗಾರಿಕೆ ನಡೆಸಿ 72 ಹೊಸಮುಖಗಳಿಗೆ ಟಿಕೆಟ್ ಕೊಡಿಸಿದರು: ಎಂಪಿ ರೇಣುಕಾಚಾರ್ಯ
|

Updated on: Sep 01, 2023 | 2:17 PM

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ (MP Renukacharya) ಬೆಂಕಿಯುಗುಳಿದರು. ಇಂದು ನಗರದಲ್ಲಿ ಟಿವಿ9  ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಕಡೆಗಣಿಸುವ ಷಡ್ಯಂತ್ರ ರಚಿಸುವಲ್ಲಿ ಯಶಕಂಡ ಸಂತೋಷ್ ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟರು ಎಂದು ಹೇಳಿದರು. ಜಗದೀಶ್ ಶೆಟ್ಟರ್ ಪಕ್ಷಕ್ಕಾಗಿ ಜೀವತೇದವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು, ಶೆಟ್ಟರ್ ಶಾಸಕನಾಗಿ, ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು-ಅಂಥವರಿಗೆ ಟಿಕೆಟ್ ನೀಡಲಿಲ್ಲ, ಕುರುಬ ಜನಾಂಗದ ದೊಡ್ಡ ಪ್ರತಿನಿಧಿಯಾಗಿದ್ದ ಕೆಎಸ್ ಈಶ್ವರಪ್ಪ, ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಮೊದಲಾದವರಿಗೆ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು. ಯಡಿಯೂರಪ್ಪನವರನ್ನು ದ್ವೇಷಿಸುತ್ತಿದ್ದವರಿಗೆ ಮಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಲಾಗುತಿತ್ತು. ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಏಕೈಕ ಉದ್ದೇಶದಿಂದ ಸಂತೋಷ್ ಗುಂಪುಗಾರಿಕೆ ನಡೆಸಿ 72 ಹೊಸಮುಖಗಳಿಗೆ ಟಿಕೆಟ್ ಕೊಡಿಸಿದರು ಎಂದು ರೇಣುಕಾಚಾರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us