ಕೈಗಾರಿಕಾ ಪ್ರದೇಶದಲ್ಲಿ ಹಲವಾರು ರೋಗಗ್ರಸ್ತ ಯೂನಿಟ್​ಗಳಿದ್ದು ಚಿರತೆ ಅಲ್ಲಿ ಸೇರಿರುವ ಸಾಧ್ಯತೆಯಿದೆ: ಬಸವರಾಜು, ಮೈಸೂರು ಡಿಸಿಎಫ್

|

Updated on: Jan 03, 2025 | 12:07 PM

ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಬಸ್ತಿಪುರ ಅರಣ್ಯ ಪ್ರದೇಶವಿದೆ ಮತ್ತು ಶ್ರೀರಂಗಪಟ್ಟಣದಿಂದ ಮಾಂಸ ಮತ್ತು ಮಾಂಸತ್ಯಾಜ್ಯವನ್ನು ತಂದು ಇಲ್ಲಿ ಎಸೆಯಲಾಗುತ್ತದೆ, ಅದನ್ನು ತಿನ್ನಲು ಬರುವ ನಾಯಿಗಳ ಬೇಟೆಗೆ ಚಿರತೆ ಬಂದಿರಬಹುದು ಎಂದು ಅಧಿಕಾರಿ ಹೇಳುತ್ತಾರೆ. ಚಿರತೆ ಒಂದು ಪಕ್ಷ ಕಣ್ಣಿಗೆ ಬಿದ್ದರೆ ಸಾರ್ವಜನಿಕರು ಆತಂಕಕ್ಕೊಳಗಾಗದೆ 1926 ನಂಬರ್ ಗೆ ಕಾಲ್ ಮಾಡಲು ಅವರು ಹೇಳುತ್ತಾರೆ.

ಮೈಸೂರು: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್​​ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಅದನ್ನು ಸೆರೆಹಿಡಿಯುವ ಕಾರ್ಯಾಚರಣೆ ಜಾರಿಯಲ್ಲಿದೆ. ಮೈಸೂರು ವಲಯದ ಅರಣ್ಯಾಧಿಕಾರಿ ಕೆಎನ್ ಬಸವರಾಜು ನಮ್ಮ ವರದಿಗಾರನೊಂದಿಗೆ ಮಾತಾಡಿದ್ದು, 5-6 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಚಿರತೆ ಕಾಣಿಸಿಕೊಂಡಿದೆ, ಈ ಪ್ರದೇಶದಲ್ಲಿ ಹಲವಾರು ರೋಗಗ್ರಸ್ತ, ಮತ್ತು ಬಳಕೆ ನಿಂತುಹೋಗಿರುವ ಕೈಗಾರಿಕಾ ಯುನಿಟ್ ಗಳು ಇರೋದ್ರಿಂದ ಚಿರತೆ ಅವುಗಳಲ್ಲಿ ಸೇರಿರುವ ಸಾಧ್ಯತೆಯಿದೆ, ಅರಣ್ಯ ಸಿಬ್ಬಂದಿ ಕ್ಯಾಂಪಸ್​ನಲ್ಲಿ ಕೆಮೆರಾಗಳನ್ನು ಅಳವಡಿಸಿದೆ, ಚಿರತೆಯ ಇಮೇಜ್ ಕೆಮೆರಾದಲ್ಲಿ ಕಂಡ ಕೂಡಲೇ ಅದನ್ನು ಸೆರೆಹಿಡಿಯುವ ಕೆಲಸಕ್ಕೆ ಸಿಬ್ಬಂದಿ ಮುಂದಾಗುತ್ತದೆ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ಸೊಳ್ಳೆ ಪರದೆ ಹಿಡಿದು ಚಿರತೆ ಬೇಟೆಗೆ ಹೊರಟ ಬಿಜೆಪಿಯ ಮಾಜಿ ಶಾಸಕ