ಸಿದ್ಧಗಂಗಾ ಶ್ರೀಗಳನ್ನು ವಿವಾಹಕ್ಕೆ ಆಮಂತ್ರಿಸಿದ ಡಾಲಿ ಹೇಳಿದ್ದು ಹೀಗೆ
Daali Dhananjay: ಡಾಲಿ ಧನಂಜಯ್, ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರನ್ನು ಡಾಲಿ ಧನಂಜಯ್ ಮದುವೆಗೆ ಆಹ್ವಾನಿಸಲಿದ್ದಾರೆ. ಇಂದು (ಜನವರಿ 03) ಸಿದ್ದಗಂಗಾ ಶ್ರೀಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
ನಟ, ನಿರ್ಮಾಪಕ ಡಾಲಿ ಧನಂಜಯ್ ಫೆಬ್ರವರಿ ತಿಂಗಳಲ್ಲಿ ವಿವಾಹವಾಗುತ್ತಿದ್ದಾರೆ. ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ಡಾಲಿ ಹಾಗೂ ಧನ್ಯತಾ ಅವರೊಟ್ಟಿಗೆ ವಿವಾಹವಾಗಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮದುವೆ ನಡೆಯಲಿದ್ದು, ಮದುವೆ ಆಹ್ವಾನ ಪತ್ರಿಕೆ ವಿತರಣೆಯಲ್ಲಿ ಡಾಳಿ ಧನಂಜಯ್ ಬ್ಯುಸಿಯಾಗಿದ್ದಾರೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರನ್ನು ಸಹ ಡಾಲಿ ಧನಂಜಯ್ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಇಂದು (ಜನವರಿ 03) ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಡಾಲಿ ಧನಂಜಯ್ ಸಿದ್ದಗಂಗಾ ಶ್ರೀಗಳು ಮದುವೆಗೆ ಆಹ್ವಾನಿಸಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಈ ಬಗ್ಗೆ ಮಾತನಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos