Tumakuru: ಕಡಿಮೆ ಬಸ್ ಫ್ರೀಕ್ವೆನ್ಸಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಸಾರಿಗೆ ಸಚಿವರೇ!
ಬಸ್ ನಿಲ್ಲಿಸಲಿಲ್ಲ ಅಂತ ವಿದ್ಯಾರ್ಥಿನಿಯರು ಬಸ್ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಕ್ಯಾತೆ ತೆಗೆಯುವ ಸಂದರ್ಭಗಳು ಪದೇಪದೆ ಜರುಗುತ್ತಿವೆ
ತುಮಕೂರು: ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಸ್ ಗಳ ಅನಾನುಕೂಲ ಜಾಸ್ತಿಯಾಗುತ್ತಿದೆ. ಶಿರಾದಿಂದ ತುಮಕೂರು ನಗರದ ನಡುವೆ ಬಸ್ ಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಬಸ್ ನಿಲ್ಲಿಸಲಿಲ್ಲ ಅಂತ ವಿದ್ಯಾರ್ಥಿನಿಯರು ಬಸ್ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಕ್ಯಾತೆ ತೆಗೆಯುವ ಸಂದರ್ಭಗಳು ಪದೇಪದೆ ಜರುಗುತ್ತಿವೆ. ನೆಲೆಹಾಳ್ ಗ್ರಾಮದಲ್ಲಿ ಈ ವಿದ್ಯಾರ್ಥಿನಿಯರು ಬಸ್ ಗಾಗಿ ಕಾಯುತ್ತಿದ್ದಾಗ ಅವರೊಂದಿಗೆ ವಾದ ಮಾಡುತ್ತಿರುವ ಡ್ರೈವರ್ ಬಸ್ ನಿಲ್ಲಿಸದೆ ತುಮಕೂರಿಗೆ ಬಂದುಬಿಟ್ಟಿದ್ದಾನೆ. ಬೇರೆ ಸಾರಿಗೆ ವ್ಯವಸ್ಥೆ ಮಾಡಿಕೊಂಡು ತುಮಕೂರು ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿಯರ ಗುಂಪು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ ತುಂಬಿ ತುಳುಕುತ್ತಿರುವ ಸಮಸ್ಯೆಯನ್ನು ಚಾಲಕ ಹೇಳಿಕೊಳ್ಳುತ್ತಿದ್ದಾನೆ. ಅಸಲಿಗೆ ತಪ್ಪು ಕೆಎಸ್ ಆರ್ ಟಸಿ ಸಂಸ್ಥೆಯದು. ಶಾಲಾ ಕಾಲೇಜುಗಳು ಆರಂಭ ಮತ್ತು ಮುಗಿಯವ ಸಮಯದಲ್ಲಿ ಸಂಬಂಧಪಟ್ಟ ಡಿಪೋ ಹೆಚ್ಚುವರಿ ಬಸ್ ಗಳನ್ನು ಓಡಿಸುವ ತುರ್ತು ಅವಶ್ಯಕತೆಯಿದೆ. ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಯೋಚಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ