Shakti Scheme: ಅದೆಂಗಯ್ಯ ಬಸ್ಸಲ್ಲಿ ಬರೀ ಗಂಡಸರನ್ನು ತುಂಬ್ಸಿದ್ದೀಯಾ? ಕೆಎಸ್ಆರ್​ಟಿಸಿ ಬಸ್ ಕಂಡಕ್ಟರ್ ಗೆ ಮಹಿಳೆಯರ ತರಾಟೆ!

Shakti Scheme: ಅದೆಂಗಯ್ಯ ಬಸ್ಸಲ್ಲಿ ಬರೀ ಗಂಡಸರನ್ನು ತುಂಬ್ಸಿದ್ದೀಯಾ? ಕೆಎಸ್ಆರ್​ಟಿಸಿ ಬಸ್ ಕಂಡಕ್ಟರ್ ಗೆ ಮಹಿಳೆಯರ ತರಾಟೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 19, 2023 | 12:50 PM

ಮಹಿಳೆಯರ ಆರೋಪವೆಂದರೆ ನಿರ್ವಾಹಕ ಮತ್ತು ಚಾಲಕ ಉದ್ದೇಶಪೂರ್ವಕವಾಗಿ ಪುರುಷ ಪ್ರಯಾಣಿಕರನ್ನು ಬಸ್ಸಲ್ಲಿ ಹತ್ತಿಸಿಕೊಂಡು ಅವರಿಗೆ ಜಾಗವಿಲ್ಲದಂತೆ ಮಾಡಿದ್ದಾರೆ.

ಧರ್ಮಸ್ಥಳ: ಬಸ್ಸಲ್ಲಿ ಯಾಕಯ್ಯ ಬರೀ ಗಂಡಸರನ್ನು ತುಂಬ್ಸಿಕೊಂಡ್ ಬಂದಿದ್ದೀಯಾ? ಇದೇನ್ ನಿಮ್ಮಪ್ಪಂದಾ? ನಾವ್ ಹೆಂಗೆ ಪ್ರಯಾಣ ಮಾಡೋದು? ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ (Dharmasthala) ಮಹಿಳೆಯರ ಗುಂಪೊಂದು ಧರ್ಮಸ್ಥಳ-ಚಿತ್ತದುರ್ಗ-ಹೊಸಪೇಟೆ ಮಾರ್ಗದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ವೈರಲ್ ಆಗಿದೆ ಮಾರಾಯ್ರೇ. ಮಹಿಳೆಯರ ಆರೋಪವೆಂದರೆ ನಿರ್ವಾಹಕ ಮತ್ತು ಚಾಲಕ ಉದ್ದೇಶಪೂರ್ವಕವಾಗಿ ಪುರುಷ ಪ್ರಯಾಣಿಕರನ್ನು (male passengers) ಬಸ್ಸಲ್ಲಿ ಹತ್ತಿಸಿಕೊಂಡು ತಮಗೆ ಜಾಗವಿಲ್ಲದಂತೆ ಮಾಡಿದ್ದಾರೆ. ಅವರಿಬ್ಬರು ಸಮಜಾಯಿಷಿ ನೀಡಲು ಪ್ರಯತ್ನಿಸುತ್ತಿರುವರಾದರೂ ಶಕ್ತಿ ಯೋಜನೆಯ ಫಲಾನುಭವಿಗಳಾಗಿರುವ ಮಹಿಳೆಯರು ಕೇಳಲು ತಯಾರಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ