ಸಿದ್ದರಾಮಯ್ಯಕ್ಕಿಂತ ಮೊದಲು ಅನಂತಕುಮಾರ ಹೆಗಡೆ ನನ್ನೊಂದಿಗೆ ಚರ್ಚೆಗೆ ಕೂರಲಿ: ಪ್ರದೀಪ್ ಈಶ್ವರ್

|

Updated on: Jan 17, 2024 | 1:34 PM

ಸಂಸದರು ಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಕಳೆದ ವರ್ಷ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಕೋಲಾಗೆ ಬಂದಾಗ ಹೋಗಿ ಅವರನ್ನು ಸ್ವಾಗತಿಸುವ ಸೌಜನ್ಯತೆ ಅವರಲ್ಲಿರಲಿಲ್ಲ, ಯಾವ ಸೌಜನ್ಯತೆ ಬಗ್ಗೆ ಅವರು ಮಾತಾಡುತ್ತಾರೆ? ಎಂದು ಈಶ್ವರ್ ಪ್ರಶ್ನಿಸಿದರು.

ಬೆಂಗಳೂರು: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಇಂದು ನಗರಕ್ಕೆ ಭೇಟಿ ನೀಡಿ ರಾಜ್ಯದ ಪ್ರಮುಖ ನಾಯಕರನ್ನು ಭೇಟಿಯಾದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸಭ್ಯತೆ ಮತ್ತು ಸೌಜನ್ಯದ ವಿಷಯದಲ್ಲಿ ಸಾರ್ವಜನಿಕ ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಪಂಥಾಹ್ವಾನ ನೀಡಿರುವ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ ಹೆಗಡೆಯವರಿಗೆ (Anantkumar Hegde) ಸವಾಲೆಸೆದರು. ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸುವ ಮೊದಲು ತನ್ನೊಂದಿಗೆ ಚರ್ಚೆಗೆ ಕೂರುವಂತೆ ಈಶ್ವರ್ ಹೇಳಿದರು. ಸಂಸದ, ಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಕಳೆದ ವರ್ಷ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಕೋಲಾಗೆ ಬಂದಾಗ ಹೋಗಿ ಅವರನ್ನು ಸ್ವಾಗತಿಸುವ ಸೌಜನ್ಯತೆ ಅವರಲ್ಲಿರಲಿಲ್ಲ, ಯಾವ ಸೌಜನ್ಯತೆ ಬಗ್ಗೆ ಅವರು ಮಾತಾಡುತ್ತಾರೆ? ಮೊದಲು ಅವರು ತನ್ನೊಂದಿಗೆ ಚರ್ಚೆ ನಡೆಸಲಿ, ಗೆದ್ದರೆ ತಾನೇ ಖುದ್ದಾಗಿ ಅವರನ್ನು ಸಿದ್ದರಾಮಯ್ಯರಲ್ಲಿಗೆ ಕರೆದೊಯ್ಯುವುದಾಗಿ ಈಶ್ವರ್ ಹೇಳಿದರು. ಕಾಂಗ್ರೆಸ್ ನಾಯಕರು ಹೆಗಡೆಯವರಿಗೆ ಗೌರವದಿಂದ ಮಾತಾಡುವ ಅರ್ಥ ಅವರು ಅದಕ್ಕೆ ಅರ್ಹರು ಅಂತಲ್ಲ ತಾವು ಬೆಳೆದ ಸಂಸ್ಕೃತಿ ಹಾಗಿದೆ ಅಂತ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on