Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಅಭಿಮಾನಿಗಳ ಮೂರು ಕುಟುಂಬಗಳಿಗೆ ಯಶ್ ನೆರವಿನ ಹಸ್ತ, ತಲಾ ಐದೈದು ಲಕ್ಷ ರೂ. ಆರ್ಥಿಕ ನೆರವು

ಮೃತ ಅಭಿಮಾನಿಗಳ ಮೂರು ಕುಟುಂಬಗಳಿಗೆ ಯಶ್ ನೆರವಿನ ಹಸ್ತ, ತಲಾ ಐದೈದು ಲಕ್ಷ ರೂ. ಆರ್ಥಿಕ ನೆರವು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2024 | 2:23 PM

ಮೃತ ಯಶ್ ಅಭಿಮಾನಿಗಳು ತಮ್ಮ ತಮ್ಮ ಕುಟುಂಬಗಳ ಆದಾಯದ ಏಕೈಕ ಮೂಲವಾಗಿದ್ದರು. ಅವರಿಂದಲೇ ಮನೆ ನಡೆಯುತ್ತಿತ್ತು ಅಂತ ಮೂರು ಕುಟುಂಬದ ಸದಸ್ಯರು ಹೇಳಿದ್ದಾರೆ. ನಟ ಯಶ್ ಅವರಲ್ಲದೆ, ಕರ್ನಾಟಕ ಸರ್ಕಾರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ಕೆಲ ಸಂಘಸಂಸ್ಥೆಗಳು ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಅಭಿನಂದನೀಯ.

ಗದಗ: ತಮ್ಮ ಹುಟ್ಟುಹಬ್ಬದ ದಿನ ಜಿಲ್ಲೆಯ ಸೂರಣಗಿಯಲ್ಲಿ ಕಟೌಟ್ ಕಟ್ಟುವಾಗ ದಾರುಣ ಮರಣವನ್ನಪ್ಪಿದ ಯುವ ಅಭಿಮಾನಿಗಳ ಕುಟುಂಬಗಳನ್ನು ಸಂತೈಸಲು ಚಿತ್ರನಟ ಯಶ್ (cine actor Yash) ಅದೇ ದಿನ ಧಾವಿಸಿದ್ದರು ಮತ್ತು ನೆರವಾಗುವ ಭರವಸೆಯನ್ನೂ ನೀಡಿದ್ದರು. ಮಾತನ್ನು ಉಳಿಸಿಕೊಂಡಿರುವ ಯಶ್ ತಮ್ಮ ಮ್ಯಾನೇಜರ್ ಚೇತನ್ (Manager Chetan) ಮತ್ತು ಅಭಿಮಾನಿ ಸಂಘದ ಪದಾಧಿಕಾರಿಗಳ ಮೂಲಕ ಮೃತ ಹಣಮಂತು (Hanumanthu), ನವೀನ್ (Navin) ಮತ್ತು ಮುರಳಿಯವರ (Murali) ಕುಟುಂಬಗಳಿಗೆ ತಲಾ ಐದೈದು ಲಕ್ಷ ರೂ.ಗಳ ಚೆಕ್ ಕಳಿಸಿದ್ದಾರೆ. ಚೇತನ್ ಮತ್ತು ಪದಾಧಿಕಾರಿಗಳು ಇನ್ನೂ ಶೋಕಿಸುತ್ತಿರುವ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಪುತ್ರಶೋಕ ನಿರಂತರ ಎಂಬ ಮಾತಿದೆ, ಈ ಕುಟುಂಬಗಳನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಮೃತ ಯಶ್ ಅಭಿಮಾನಿಗಳು ತಮ್ಮ ತಮ್ಮ ಕುಟುಂಬಗಳ ಆದಾಯದ ಏಕೈಕ ಮೂಲವಾಗಿದ್ದರು. ಅವರಿಂದಲೇ ಮನೆ ನಡೆಯುತ್ತಿತ್ತು ಅಂತ ಮೂರು ಕುಟುಂಬದ ಸದಸ್ಯರು ಹೇಳಿದ್ದಾರೆ. ನಟ ಯಶ್ ಅವರಲ್ಲದೆ, ಕರ್ನಾಟಕ ಸರ್ಕಾರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ಕೆಲ ಸಂಘಸಂಸ್ಥೆಗಳು ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಅಭಿನಂದನೀಯ. ಕಟೌಟ್ ಕಟ್ಟುವಾಗ ಗಾಯಗೊಂಡವರಿಗೂ ಧನಸಹಾಯ ಮಾಡುವಂತೆ ಯಶ್ ಹೇಳಿರುವರೆಂದು ಚೇತನ್ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ