ದಾರುಣ ಸಾವನ್ನಪ್ಪಿದ ಯಶ್ ಅಭಿಮಾನಿಗಳ ಕುಟುಂಬಕ್ಕೆ ಭೂ ಒಡೆತನ ಯೋಜನೆ ಅಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದೇನೆ: ಹೆಚ್ ಕೆ ಪಾಟೀಲ್
ಗ್ರಾಮಸ್ಥರಲ್ಲಿ ಕೆಲವರು ಯುವಕರ ಕುಟುಂಬಗಳಿಗೆ ಭೂ ಒಡೆತನ ಯೋಜನೆ ಅಡಿ ಜಮೀನು ಮಂಜೂರು ಮಾಡಿಸುವಂತೆ ಹೇಳಿದ್ದಾರೆ. ಅವರಿಂದ ಅರ್ಜಿ ರೆಡಿ ಮಾಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಹೇಳಿದ್ದೇನೆಂದ ಸಚಿವ, ಜಿಲ್ಲಾಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಅಗತ್ಯವಿರುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರೈಸಲು ಸೂಚಿಸಿರುವುದಾಗಿ ಹೇಳಿದರು.
ಗದಗ: ಜನವರಿ 8ರಂದು ಚಿತ್ರನಟ ಯಶ್ (cine actor Yash) ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಾಗಿದ್ದ ಮೂವರು ಯುವಕರು ತಮ್ಮೂರಲ್ಲಿ ತಡರಾತ್ರಿ ಎತ್ತರದ ಕಟೌಟ್ ನಿಲ್ಲಿಸುವ ಪ್ರಯತ್ನದಲ್ಲಿದ್ದಾಗ ವಿದ್ಯುತ್ ಪ್ರವಹಿಸಿ ದಾರುಣ ಸಾವನ್ನಪ್ಪಿದ; ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ (HK Patil) ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ತಲಾ 2 ಲಕ್ಷ ರೂ. ಚೆಕ್ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಮಕ್ಕಳನ್ನು ಕಳೆದದುಕೊಂಡಿರುವ ಮೂರೂ ಕುಟುಂಬದ ಸದಸ್ಯರು ಇನ್ನೂ ಆಘಾತದಿಂದ (state of shock) ಚೇತರಿಸಿಕೊಂಡಿಲ್ಲ, ಅವರು ಸರ್ಕಾರದ ಮುಂದೆ ಯಾವುದೇ ಬೇಡಿಕೆಯನ್ನಿಡಲಿಲ್ಲ, ಚೆಕ್ ಸ್ವೀಕರಿಸಲು ಸಹ ಅವರು ನಿರಾಕರಿಸಿದರು ಎಂದು ಪಾಟೀಲ್ ಹೇಳಿದರು.
ಗ್ರಾಮಸ್ಥರಲ್ಲಿ ಕೆಲವರು ಯುವಕರ ಕುಟುಂಬಗಳಿಗೆ ಭೂ ಒಡೆತನ ಯೋಜನೆ ಅಡಿ ಜಮೀನು ಮಂಜೂರು ಮಾಡಿಸುವಂತೆ ಹೇಳಿದ್ದಾರೆ. ಅವರಿಂದ ಅರ್ಜಿ ರೆಡಿ ಮಾಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಹೇಳಿದ್ದೇನೆಂದ ಸಚಿವ, ಜಿಲ್ಲಾಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಅಗತ್ಯವಿರುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರೈಸಲು ಸೂಚಿಸಿರುವುದಾಗಿ ಹೇಳಿದರು. ಶಾಸಕ ಜಿಎಸ್ ಪಾಟೀಲ್ ಸಚಿವರೊಂದಿಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ