ಇಟ್ಟಿಗೆ ಗೂಡಿನಲ್ಲಿ ಬೃಹತ್ ಹೆಬ್ಬಾವು ಸೆರೆ, ವಿಡಿಯೋ ಇದೆ
ನಾಯಿ ಮರಿ ತಿನ್ನಲು ಇಟ್ಟಿಗೆ ಕಾರ್ಖಾನೆಗೆ ಬಂದಿದ್ದ ಬೃಹತ್ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ. ಇಟ್ಟಿಗೆ ಕಾರ್ಖಾನೆಯಲ್ಲಿ ಹೆಬ್ಬಾವು ಕಂಡು ಜನ ಬೆಚ್ಚಿಬಿದ್ದಿದ್ದರು. ತಕ್ಷಣ ಉರಗ ಸಂರಕ್ಷಕರನ್ನು ಕರಿಸಿ ಹಾವಿನ ರಕ್ಷಣೆ ಮಾಡಲಾಗಿದೆ. ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯಾಧಿಕಾರಿ ಮಾರ್ಗದರ್ಶನದಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ತುಮಕೂರು, ಜ.13: ಜಿಲ್ಲೆಯ ಹೀರೆಹಳ್ಳಿ ಸಮೀಪದ ರಾಯರಪಾಳ್ಯ ಗ್ರಾಮದ ಪ್ರತಾಪ್ ಎಂಬುವರಿಗೆ ಸೇರಿದ ಇಟ್ಟಿಗೆ ಗೂಡಿನಲ್ಲಿ ಬೃಹತ್ ಹೆಬ್ಬಾವು ಸೆರೆ ಸಿಕ್ಕಿದೆ. ನಾಯಿ ಮರಿ ತಿನ್ನಲು ಇಟ್ಟಿಗೆ ಕಾರ್ಖಾನೆಗೆ ಬಂದಿದ್ದ ಬೃಹತ್ ಹೆಬ್ಬಾವನ್ನು ಕಂಡು ಜನ ಬೆಚ್ಚಿಬಿದ್ದಿದ್ದರು. ತಕ್ಷಣ ಉರಗ ಸಂರಕ್ಷಕರನ್ನು ಕರೆಸಿ ಹಾವಿನ ರಕ್ಷಣೆ ಮಾಡಲಾಗಿದೆ.
ಹೆಬ್ಬಾವು ಕಂಡು ಕಾರ್ಮಿಕರು ಭಯಭೀತರಾಗಿದ್ದು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪ್ರತಾಪ್ ಅವರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ಮಾಹಿತಿ ನೀಡಿದರು. ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ, ಚೇತನ್ ಮತ್ತು ಸ್ಯಾಮ್ಯುಯೆಲ್ ರವರು ಸ್ಥಳಕ್ಕೆ ಆಗಮಿಸಿ ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯಾಧಿಕಾರಿ ಮಾರ್ಗದರ್ಶನದಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Latest Videos