GI Tag: ಇಂಡಿ ತಾಲ್ಲೂಕಿನ ನಿಂಬೆಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್, ಬೆಳೆಗಾರರ ಸಂತಸಕ್ಕೆ ಪಾರವಿಲ್ಲ!
ಉತ್ಪನ್ನವೊಂದಕ್ಕೆ ಜಾಗತಿಕ ಮನ್ನಣೆ ಸಿಕ್ಕರೆ ಸ್ವಾಭಾವಿಕವಾಗೇ ಅದು ವಿಶ್ವದ ನಾನಾ ದೇಶಗಳಲ್ಲಿ ಬೇಡಿಕೆಯ ವಸ್ತುವಾಗಿ ಗುರುತಿಸಿಕೊಳ್ಳುತ್ತದೆ.
ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬೆ ಬೆಳೆಗಾರರು (lime growers) ಸಂತಸ ಮತ್ತು ಹೆಮ್ಮೆ ಪಡುವ ಸಂಗತಿಯೊಂದು ಜರುಗಿದೆ. ಅವರು ಬೆಳೆಯುವ ನಿಂಬೆ ಕಾಯಿ ಅಥವಾ ನಿಂಬೆಹಣ್ಣಿಗೆ ಜಿಯಾಗ್ರಾಫಿಕಲ್ ಐಡೆಂಟಿಫಿಕೇಶನ್ ಟ್ಯಾಗ್ ಸಿಕ್ಕಿದೆ (Geographical Indication Tag), ಸರಳ ಭಾಷೆಯಲ್ಲಿ ಹೇಳುವುದಾದರೆ ಅಂತಾರಾಷ್ಟ್ರೀಯ ಮಾನ್ಯತೆ (International Recognition) ಸಿಕ್ಕಿದೆ. ಜಿಐ ಟ್ಯಾಗ್ ಮಾನ್ಯತೆ ಪಡೆದುಕೊಳ್ಳುವ ಯಾವುದೇ ವಸ್ತು ತನ್ನ ಭೌಗೋಳಿಕ ವೈಶಿಷ್ಟ್ಯತೆಯನ್ನು ಪ್ರಚುರಪಡಿಸುತ್ತದೆ ಮತ್ತು ಆ ಉತ್ಪನ್ನ ಯಾವ ದೇಶದ ಯಾವ ಪ್ರದೇಶದ್ದು ಅನ್ನೋದು ವಿದಿತವಾಗುತ್ತದೆ. ಉತ್ಪನ್ನವೊಂದಕ್ಕೆ ಜಾಗತಿಕ ಮನ್ನಣೆ ಸಿಕ್ಕರೆ ಸ್ವಾಭಾವಿಕವಾಗೇ ಅದು ವಿಶ್ವದ ನಾನಾ ದೇಶಗಳಲ್ಲಿ ಬೇಡಿಕೆಯ ವಸ್ತುವಾಗಿ ಗುರುತಿಸಿಕೊಳ್ಳುತ್ತದೆ ಮತ್ತು ಇಂಡಿ ನಿಂಬೆಯ ಪ್ರಕರಣ ನೋಡುವುದಾದರೆ, ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗುತ್ತದೆ. ಹಾಗಾಗೇ ಇಂಡಿ ತಾಲ್ಲೂಕಿನ ನಿಂಬೆ ಬೆಳೆಗಾರರು ಖುಷಿಯಿಂದ ಬೀಗುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ