ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು

Updated on: Jun 06, 2026 | 5:51 PM

ಲಿಂಗಾಯತ ಸ್ವಾಮೀಜಿಗಳು ಇಂದು ಸಿಎಂ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಮಾಡಿದರು. ಧಾರವಾಡ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಲವಾರು ಸ್ವಾಮೀಜಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಉಪಸ್ಥಿತರಿದ್ದರು.

ಬೆಂಗಳೂರು, ಜೂನ್​​ 06: ಸಿಎಂ ಡಿಕೆ ಶಿವಕುಮಾರ್​​ರ ಬೆಂಗಳೂರಿನಲ್ಲಿರುವ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಡಿಕೆ ಶಿವಕುಮಾರ್​​​ಗೆ ಆಶೀರ್ವಾದ ಮಾಡಿ ಶುಭ ಹಾರೈಸಿದರು. ಧಾರವಾಡ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಿಂದಗಿಯ ಡಾಕ್ಟರ್ ಪ್ರಭು ಸಾರಂಗದೇವ ಸ್ವಾಮೀಜಿ, ಸೊಲ್ಲಾಪುರದ ಶ್ರೀಕಂಠ ಶಿವಾಚಾರ್ಯರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಶಿವಗಂಗಿಯ ಡಾಕ್ಟರ್ ಮಲೆಯ ಶಾಂತಮುನಿ ಶಿವಾಚಾರ್ಯರು, ಬೆಂಗಳೂರಿನ ಡಾಕ್ಟರ್ ಮಹಾಂತಲಿಂಗ ಶಿವಾಚಾರ್ಯರು ಮತ್ತು ಶಹಾಪುರದ ಶ್ರೀ ಸುಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಉಪಸ್ಥಿತರಿದ್ದರು. ಸ್ವಾಮೀಜಿಗಳು ಡಿಕೆ ಶಿವಕುಮಾರ್​ಗೆ ಸನ್ಮಾನ ಮಾಡಿದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್​​ ಭಾಗಿಯಾಗಿದ್ದರು.

ವರದಿ: ಈರಣ್ಣ ಬಸವ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jun 06, 2026 05:50 PM
Follow Us