ಇದು Liqour ಜಾತ್ರೆ! ಭಕ್ತರೂ ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ.. ವಿಜಯಪುರ ಬಬಲೇಶ್ವರ ಬಬಲಾದಿಯಲ್ಲಿ ಉತ್ಸವ
ಇದು Liqour ಜಾತ್ರೆ..! ಭಕ್ತರು ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ | Vijayapura ಬಬಲೇಶ್ವರ ಬಬಲಾದಿಯಲ್ಲಿ ವಿಶೇಷ ಉತ್ಸವ | ವಿಜಯಪುರ ಜಿಲ್ಲೆ ಬಬಲೇಶ್ವರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯವೇ ನೈವೇದ್ಯ..! ಉತ್ತರ ಕರ್ನಾಟಕದ ಜಾತ್ರೆ ಹಬ್ಬ ಹರಿದಿನಗಳೇ ಹಾಗೆ. ಅಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಸಂಕ್ರಮಣದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದಾಗಿ ಜಾತ್ರೆ ಹಬ್ಬಗಳ ಆಚರಣೆ ಆರಂಭವಾಗುತ್ತವೆ. ಶಿವರಾತ್ರಿ ಅಮಾವಾಸ್ಯೆಯ ಬಳಿಕ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವಿಶೇಷವಾಗಿ ನಡೆಯುತ್ತದೆ. […]
ಇದು Liqour ಜಾತ್ರೆ..! ಭಕ್ತರು ಕುಡೀತಾರೆ, ದೇವರಿಗೂ ಎಣ್ಣೆ ಕುಡಿಸ್ತಾರೆ | Vijayapura ಬಬಲೇಶ್ವರ ಬಬಲಾದಿಯಲ್ಲಿ ವಿಶೇಷ ಉತ್ಸವ | ವಿಜಯಪುರ ಜಿಲ್ಲೆ ಬಬಲೇಶ್ವರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯವೇ ನೈವೇದ್ಯ..!
ಉತ್ತರ ಕರ್ನಾಟಕದ ಜಾತ್ರೆ ಹಬ್ಬ ಹರಿದಿನಗಳೇ ಹಾಗೆ. ಅಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ. ಸಂಕ್ರಮಣದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಒಂದೊಂದಾಗಿ ಜಾತ್ರೆ ಹಬ್ಬಗಳ ಆಚರಣೆ ಆರಂಭವಾಗುತ್ತವೆ. ಶಿವರಾತ್ರಿ ಅಮಾವಾಸ್ಯೆಯ ಬಳಿಕ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ವಿಶೇಷವಾಗಿ ನಡೆಯುತ್ತದೆ. ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನು ಸಮರ್ಪಿಸುವುದೇ ಈ ಜಾತ್ರೆಯ ವೈಶಿಷ್ಟ್ಯ.
ಯಾವುದೇ ಜಾತ್ರೆಯಲ್ಲಿ ಅಲ್ಲಿ ಜನಜಂಗುಳಿ ಸೇರುವುದು, ರಥೋತ್ಸವ ನೆರವೇರುವುದು ಮಾಮೂಲು. ಇನ್ನು ದೇವರಿಗೆ ವಿವಿಧ ನೈವೇದ್ಯಗಳನ್ನು ಸಮರ್ಪಿಸುವುದು ವಾಡಿಕೆ. ಆದರೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿಯಲ್ಲಿರುವ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಯೆಸ್, ಇದು ಅಚ್ಚರಿ ಅನ್ನಿಸಿದ್ರೂ ನಿಜ.. ನೀವೇ ನೋಡಿ ದೇವರ ಮೂರ್ತಿಗಳಿಗೆ ಹೇಗೆ ಮದ್ಯ ಅರ್ಪಿಸುತ್ತಿದ್ದಾರೆ.