ಗೃಹಪ್ರವೇಶ ಮಾಡುವ ಮುನ್ನವೇ ಮನೆ ನೆಲಸಮ: ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ
ಕುಟುಂಬಕ್ಕೊಂದು ಸೂರು ಇರಬೇಕು ನಿಜ. ಆದ್ರೆ, ಇಲ್ಲೋರ್ವ ವ್ಯಕ್ತಿ ಅತಿ ಆಸೆಗೆ ಹೋಗಿ ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ ಮಾಡಿದ್ದಾರೆ. ಹೌದು...ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಿಸಿದ್ದು, ಇದೀಗ ಅವರನ್ನು ನೆಲಸಮ ಮಾಡುವ ಸ್ಥಿತಿ ಬಂದಿದೆ. ಕಿರಿದಾದ ಪಿಲ್ಲರ್ ಗಳ ಮೇಲೆಯೇ 5 ಅಂತಸ್ತಿನ ಮನೆ ನಿರ್ಮಾಣ ಮಾಡಲಾಗಿದೆ. ಇದರಿಂದ ಈಗಾಗಲೇ ಮನೆಯ ಪಾಯ(ಬುನಾದಿ)ದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಲೋ ಆಗಲೋ ಬೀಳುವ ರೀತಿಯಲ್ಲಿ ಕಾಣಿಸುತ್ತಿದೆ.
ಬೆಂಗಳೂರು, (ಸೆಪ್ಟೆಂಬರ್ 26): ಕುಟುಂಬಕ್ಕೊಂದು ಸೂರು ಇರಬೇಕು ನಿಜ. ಆದ್ರೆ, ಇಲ್ಲೋರ್ವ ವ್ಯಕ್ತಿ ಅತಿ ಆಸೆಗೆ ಹೋಗಿ ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ ಮಾಡಿದ್ದಾರೆ. ಹೌದು…ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಿಸಿದ್ದು, ಇದೀಗ ಅವರನ್ನು ನೆಲಸಮ ಮಾಡುವ ಸ್ಥಿತಿ ಬಂದಿದೆ. ಕಿರಿದಾದ ಪಿಲ್ಲರ್ ಗಳ ಮೇಲೆಯೇ 5 ಅಂತಸ್ತಿನ ಮನೆ ನಿರ್ಮಾಣ ಮಾಡಲಾಗಿದೆ. ಇದರಿಂದ ಈಗಾಗಲೇ ಮನೆಯ ಪಾಯ(ಬುನಾದಿ)ದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಲೋ ಆಗಲೋ ಬೀಳುವ ರೀತಿಯಲ್ಲಿ ಕಾಣಿಸುತ್ತಿದೆ. ಕಟ್ಟಡ ಬೀಳದಿರಲು ಒಳಗೆ, ಅಕ್ಕಪಕ್ಕ ಕಬ್ಬಿಣದ ರಾಡ್ ಗಳ ಅಳವಡಿಕೆ ಮಾಡಲಾಗಿದ್ದು, ಸ್ಥಳದಲ್ಲಿ ಜೆಸಿಬಿ ಈಗಾಗಲೇ ಇದ್ದು, ಕೆಡವಲು ಕಟ್ಟಡ ಮಾಲೀಕನೇ ಸಿದ್ಧತೆ ನಡೆಸಿದ್ದಾರೆ. ಆದ್ರೆ, ಕಟ್ಟಡ ತೆರವು ಕಾರ್ಯಾಚರಣೆ ಹೇಗೆ ಮಾಡುತ್ತಾರೆ ಎಂದು ಸುತ್ತಮುತ್ತ ಸ್ಥಳೀಯರಿಗೆ ಭಯ ಶುರುವಾಗಿದೆ.
