ಮತ ಚಲಾಯಿಸಿ ಪೋಸ್ ಕೊಟ್ಟ ರಿತೇಶ್​-ಜೆನಿಲಿಯಾ; ಇಲ್ಲಿದೆ ವಿವರ  

|

Updated on: May 07, 2024 | 10:58 AM

ಇಂದು (ಮೇ 7) ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆದಿದೆ. ಮಹಾರಾಷ್ಟ್ರದ ಲಾತೂರ್​ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ಈ ದಂಪತಿ ವೋಟ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.

ನಟ ರಿತೇಶ್ ದೇಶ್​ಮುಖ್ (Ritesh Deshmukh) ಹಾಗೂ ಜೆನಿಲಿಯಾ ದೇಶ್​ಮುಖ್​ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ರಿತೇಶ್ ಹಾಗೂ ಜೆನಿಲಿಯಾ ಒಟ್ಟಾಗಿ ವೋಟ್ ಮಾಡಿದ್ದಾರೆ. ಇಂದು (ಮೇ 7) ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆದಿದೆ. ಮಹಾರಾಷ್ಟ್ರದ ಲಾತೂರ್​ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ಈ ದಂಪತಿ ವೋಟ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಲಾತೂರ್​ನಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಹಾಲಿ ಎಂಪಿ ಸುಧಾಕರ್ ತುಕಾರಾಮ್ ಸ್ಪರ್ಧೆ ಮಾಡಿದರೆ, ‘ಇಂಡಿಯಾ’ ಮೈತ್ರಿಕೂಟದಿಂದ ಕಲ್ಗೆ ಶಿವಾಜಿ ಬಂಡ್ಡಪ್ಪ ಸ್ಪರ್ಧೆ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಿತೇಶ್ ಅವರು ‘ಹೌಸ್​ಫುಲ್ 5’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೆನಿಲಿಯಾ ಅವರು ಆಮಿರ್ ಖಾನ್ ನಟನೆಯ ‘ಸಿತಾರೇ ಜಮೀನ್​ಪರ್’ ಹಾಗೂ ಕನ್ನಡದ ‘ಜೂನಿಯರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.