UAN Number: ಇಪಿಎಫ್ ಯೂನಿವರ್ಸಲ್ ಅಕೌಂಟ್ ನಂಬರ್ ಎರಡೆರಡು ಇದ್ದರೆ ಏನಾಗುತ್ತದೆ?
ಕಂಪನಿ ಬದಲಾಯಿಸುವ ಸಂದರ್ಭದಲ್ಲಿ ಪಿಎಫ್ ಖಾತೆ ವಿವರವೂ ಬದಲಾಗುತ್ತದೆ. ಹೊಸ ಕಂಪನಿಯಲ್ಲಿ ಹೊಸ ಪಿಎಫ್ ಖಾತೆ ರಚಿಸುತ್ತಾರೆ. ಈ ಸಂದರ್ಭದಲ್ಲಿ ಬೇರೆ ಬೇರೆ ಕಾರಣಕ್ಕೆ ಒಂದಕ್ಕಿಂತ ಹೆಚ್ಚು ಇಪಿಎಫ್ ಯೂನಿವರ್ಸಲ್ ಅಕೌಂಟ್ ನಂಬರ್ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಯುಎಎನ್ ಸಂಖ್ಯೆಗಳನ್ನು ವಿಲೀನಗೊಳಿಸುವುದು ಎರಡು ಇಪಿಎಫ್ ಖಾತೆಗಳನ್ನು ಮರ್ಜ್ ಮಾಡಿದಷ್ಟು ಸುಲಭವಲ್ಲ.
ವಿವಿಧ ಕಾರಣಕ್ಕಾಗಿ ನಾವು ಕೆಲವೊಮ್ಮೆ ಕೆಲಸ ಬದಲಾಯಿಸುತ್ತೇವೆ. ಕಂಪನಿ ಬದಲಾಯಿಸುವ ಸಂದರ್ಭದಲ್ಲಿ ಪಿಎಫ್ ಖಾತೆ ವಿವರವೂ ಬದಲಾಗುತ್ತದೆ. ಹೊಸ ಕಂಪನಿಯಲ್ಲಿ ಹೊಸ ಪಿಎಫ್ ಖಾತೆ ರಚಿಸುತ್ತಾರೆ. ಈ ಸಂದರ್ಭದಲ್ಲಿ ಬೇರೆ ಬೇರೆ ಕಾರಣಕ್ಕೆ ಒಂದಕ್ಕಿಂತ ಹೆಚ್ಚು ಇಪಿಎಫ್ ಯೂನಿವರ್ಸಲ್ ಅಕೌಂಟ್ ನಂಬರ್ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಯುಎಎನ್ ಸಂಖ್ಯೆಗಳನ್ನು ವಿಲೀನಗೊಳಿಸುವುದು ಎರಡು ಇಪಿಎಫ್ ಖಾತೆಗಳನ್ನು ಮರ್ಜ್ ಮಾಡಿದಷ್ಟು ಸುಲಭವಲ್ಲ. ನೀವು ಇಪಿಫ್ಒದ ನಿಗದಿತ ಇಮೇಲ್ಗೆ ವಿವರವನ್ನು ಕಳುಹಿಸಬೇಕು. ಈಗ ಕೆಲಸ ಮಾಡುತ್ತಿರುವ ಸಂಸ್ಥೆಗೆ ಮಾಹಿತಿ ನೀಡಿ ಅವರ ಸಹಾಯದಿಂದ ಯುಎಎನ್ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಬಹುದು.
Latest Videos