21 ವರ್ಷದ ಹಿಂದೆ ಪ್ರಿಯಕರ ಕೊಟ್ಟ ಹೂವು​ ಜೆನಿಲಿಯಾ ಬಳಿ ಇನ್ನೂ ಹೇಗಿದೆ ನೋಡಿ..

ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ಸಿನಿಮಾ ತಾರೆಯರ ಪ್ರೀತಿ-ಪ್ರೇಮದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಜೆನಿಲಿಯಾ ಡಿಸೋಜಾ ಮತ್ತು ರಿತೇಶ್​ ದೇಶಮುಖ್​ ಅವರ ಲವ್​​ಸ್ಟೋರಿಯನ್ನೂ ನೆನಪಿಸಿಕೊಳ್ಳಲಾಗುತ್ತಿದೆ. ಜೆನಿಲಿಯಾಗೆ 21 ವರ್ಷಗಳ ಹಿಂದೆ ರಿತೇಶ್​ ಅವರು ನೀಡಿದ್ದ ಅತ್ಯಮೂಲ್ಯವಾದ ಗಿಫ್ಟ್​ನ ಫೋಟೋ ಈಗ ಮತ್ತೆ ವೈರಲ್​ ಆಗುತ್ತಿದೆ.

21 ವರ್ಷದ ಹಿಂದೆ ಪ್ರಿಯಕರ ಕೊಟ್ಟ ಹೂವು​ ಜೆನಿಲಿಯಾ ಬಳಿ ಇನ್ನೂ ಹೇಗಿದೆ ನೋಡಿ..
ಜೆನಿಲಿಯಾ ಡಿಸೋಜಾ, ರಿತೇಶ್​ ದೇಶಮುಖ್​
Follow us
ಮದನ್​ ಕುಮಾರ್​
|

Updated on: Feb 14, 2024 | 12:24 PM

ನಟಿ ಜೆನಿಲಿಯಾ ಡಿಸೋಜಾ (Genelia D’souza) ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಸಿನಿಮಾದಲ್ಲೂ, ರಿಯಲ್​ ಲೈಫ್​ನಲ್ಲೂ ಅವರನ್ನು ಇಷ್ಟಪಡುವ ಅಪಾರ ಅಭಿಮಾನಿಗಳು ಇದ್ದಾರೆ. ನಟ ರಿತೇಶ್​ ದೇಶಮುಖ್​ ಜೊತೆ ಜೆನಿಲಿಯಾ ಅವರದ್ದು ಚಂದದ ಲವ್​ಸ್ಟೋರಿ. ಅವರಿಬ್ಬರ ಪ್ರೇಮಕಥೆ ಶುರುವಾಗಿದ್ದು 2003ರಲ್ಲಿ. ಆ ಸಂದರ್ಭದಲ್ಲಿ ರಿತೇಶ್ ದೇಶಮುಖ್​ (Riteish Deshmukh) ನೀಡಿದ ಗುಲಾಬಿ ಹೂವನ್ನು ಜೆನಿಲಿಯಾ ಅವರು ಈಗಲೂ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಪಾಲಿಗೆ ಈ ಹೂವು ಅಷ್ಟು ಅಮೂಲ್ಯವಾದದ್ದು. ಇಂದು (ಫೆಬ್ರವರಿ 14) ಪ್ರೇಮಿಗಳ ದಿನ (Valentine’s Day). ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಪ್ರೀತಿ-ಪ್ರೇಮದ ಬಗ್ಗೆ ಫ್ಯಾನ್ಸ್​ ಮಾತನಾಡುತ್ತಿದ್ದಾರೆ. ಜೆನಿಲಿಯಾ-ರಿತೇಶ್​ ಅವರ ಲವ್​​ಸ್ಟೋರಿಯನ್ನೂ ಸೋಶಿಯಲ್​ ಮೀಡಿಯಾದಲ್ಲಿ ಮೆಲುಕು ಹಾಕಲಾಗುತ್ತಿದೆ.

ಜೆನಿಲಿಯಾ ಡಿಸೋಜಾ ನಟಿಸಿದ ಮೊದಲ ಸಿನಿಮಾ ‘ತುಜೆ ಮೇರಿ ಕಸಮ್​’ 2003ರಲ್ಲಿ ಬಿಡುಗಡೆ ಆಯಿತು. ಆ ಸಿನಿಮಾಗೆ ಹೀರೋ ಆಗಿದ್ದವರು ರಿತೇಶ್​ ದೇಶಮುಖ್​. ಅದು ರಿತೇಶ್​ ನಟನೆಯ ಮೊದಲ ಸಿನಿಮಾ ಕೂಡ ಹೌದು. ಖ್ಯಾತ ರಾಜಕಾರಣಿ ವಿಲಾಸ್​ ರಾವ್​ ದೇಶಮುಖ್​ ಅವರ ಪುತ್ರ ರಿತೇಶ್​. ರಾಜಕಾರಣಿಯ ಮಗ ಎಂಬ ಕಾರಣಕ್ಕೆ ರಿತೇಶ್​ ಅವರಿಗೆ ಅಹಂ ಇರಬಹುದು ಎಂದು ಜೆನಿಲಿಯಾ ಅಂದುಕೊಂಡಿದ್ದರು. ಆದರೆ ರಿತೇಶ್​ ಅವರ ಗುಣ ಆ ರೀತಿ ಇರಲಿಲ್ಲ. ಇಬ್ಬರ ನಡುವೆ ಪ್ರೀತಿ ಮೂಡಿತು. ಆ ದಿನಗಳಲ್ಲಿ ಕೆಂಪು ಗುಲಾಬಿ ಹೂವನ್ನು ಜೆನಿಲಿಯಾಗೆ ರಿತೇಶ್​ ನೀಡಿದ್ದರು.

2022ರ ಜೂನ್​ನಲ್ಲಿ ಜೆನಿಲಿಯಾ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ‘ರಿತೇಶ್ ನಿಮಗೆ ನೀಡಿದ ಬೆಸ್ಟ್​ ಗಿಫ್ಟ್​ ಯಾವುದು’ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಜೆನಿಲಿಯಾ ಅವರು ಎರಡು ದಶಕಗಳಷ್ಟು ಹಳೆಯದಾದ ಗುಲಾಬಿ ಹೂವನ್ನು ತೋರಿಸಿದ್ದರು! ಪ್ರಿಯಕರ ನೀಡಿದ ಆ ಉಡುಗೊರೆಯನ್ನು ಇಂದಿಗೂ ಅಷ್ಟು ಜೋಪಾನವಾಗಿ ಕಾಪಾಡಿಕೊಂಡಿರುವ ಅವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ: ನಟಿ ಜೆನಿಲಿಯಾ ಮತ್ತೆ ಪ್ರೆಗ್ನೆಂಟ್​ ಎಂದವರಿಗೆ ಉತ್ತರ ಕೊಟ್ಟ ರಿತೇಶ್​

2023ರ ಫೆಬ್ರವರಿಯಲ್ಲಿ ರಿತೇಶ್​ ದೇಶಮುಖ್​ ಅವರು ಇದೇ ಗುಲಾಬಿ ಹೂವಿನ ಬಗ್ಗೆ ಮಾತನಾಡಿದ್ದರು. ‘ನಾನು ಆಕೆಗೆ ಒಂದು ಗುಲಾಬಿ ಹೂವು ನೀಡಿದ್ದೆ. ಅದನ್ನು ಇನ್ನೂ ಇಟ್ಟುಕೊಂಡಿದ್ದಾಳೆ. 20 ವರ್ಷ ಆಗಿದೆ. ಅದನ್ನು ನಾವು ಇನ್ನೂ ಇಟ್ಟುಕೊಂಡಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿದ್ದರು ರಿತೇಶ್​ ದೇಶಮುಖ್​. ಸುಮಾರು 9 ವರ್ಷಗಳ ಕಾಲ ಪರಸ್ಪರ ಡೇಟಿಂಗ್​ ಮಾಡಿದ ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಅವರು 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್​

ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ದಂಪತಿ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಜೆನಿಲಿಯಾ ಫೇಮಸ್​ ಆಗಿದ್ದಾರೆ. 2008ರಲ್ಲಿ ಬಂದ ‘ಸತ್ಯ ಇನ್​ ಲವ್​’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಜೆನಿಲಿಯಾ ಕಾಲಿಟ್ಟರು. ಈಗ ಅವರು ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್​’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆ ಮೂಲಕ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ