ಟೆರೇಸ್ನಿಂದ ರಣಬೀರ್, ಆಲಿಯಾ ಮನೆ ಪ್ರವೇಶಿಸಿದ ಶಾರುಖ್; ವಿಡಿಯೋ ವೈರಲ್
ರಣಬೀರ್ ಕಪೂರ್ ಅವರು ‘ರಾಕ್ಸ್ಟಾರ್’ ಪಾತ್ರದಲ್ಲಿ, ಆಲಿಯಾ ಭಟ್ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಪಾತ್ರದ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಹೊಸ ಮನೆಯ ಗೃಹಪ್ರವೇಶ ನಡೆಸುತ್ತಿರುತ್ತಾರೆ. ಮನೆಗೆ ಬಂದ ಎಲ್ಲರನ್ನೂ ಸ್ವಾಗತಿಸುತ್ತಾ ಇರುತ್ತಾರೆ. ಆಗ ಶಾರುಖ್ ಖಾನ್ ಅವರ ಎಂಟ್ರಿ ಆಗುತ್ತದೆ. ಅದೂ ನೇರವಾಗಿ ಟೆರೇಸ್ನಿಂದ!
ಶಾರುಖ್ ಖಾನ್, ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಡುವೆ ಒಳ್ಳೆಯ ಗೆಳೆತನ ಇದೆ. ಹಲವು ವರ್ಷಗಳಿಂದ ಈ ಮೂವರು ಒಟ್ಟಾಗಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಇದೆ. ಈಗ ಶಾರುಖ್ ಖಾನ್, ರಣಬಿರ್ ಕಪೂರ್ ಹಾಗೂ ಆಲಿಯಾ ಭಟ್ ಒಂದೇ ಜಾಹೀರಾತಿನಲ್ಲಿ ನಟಿಸಿದ್ದಾರೆ. ಈ ಜಾಹೀರಾತು ಸಾಕಷ್ಟು ಗಮನ ಸೆಳೆಯುತ್ತಿದೆ.
ರಣಬೀರ್ ಕಪೂರ್ ಅವರು ‘ರಾಕ್ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದರು. ಆಲಿಯಾ ಭಟ್ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ಚಿತ್ರಗಳ ಪಾತ್ರಗಳಲ್ಲಿ ರಂಬೀರ್ ಹಾಗೂ ಆಲಿಯಾ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಹೊಸ ಮನೆಯ ಗೃಹಪ್ರವೇಶ ನಡೆಸುತ್ತಿರುತ್ತಾರೆ. ಮನೆಗೆ ಬಂದ ಎಲ್ಲರನ್ನೂ ಸ್ವಾಗತಿಸುತ್ತಾ ಇರುತ್ತಾರೆ. ಆಗ ಶಾರುಖ್ ಖಾನ್ ಅವರ ಎಂಟ್ರಿ ಆಗುತ್ತದೆ. ಅದೂ ನೇರವಾಗಿ ಟೆರೇಸ್ನಿಂದ!
ಶಾರುಖ್ ಖಾನ್ ಅವರು ರಯೀಸ್ ಲುಕ್ನಲ್ಲಿ ಬಂದಿದ್ದಾರೆ. ರೂಫ್ಟಾಪ್ನ ಒಡೆದು ಅವರ ಆಗಮನ ಆಗಿದೆ. ‘ಸೀದಾ ಮನೆ ಒಳಗೆ ನುಗ್ಗಿದ್ರಲ್ಲ ರಯೀಸ್ ಭಾಯ್’ ಎನ್ನುತ್ತಾರೆ ಆಲಿಯಾ. ‘ಪಾರ್ಟಿ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅಲ್ಲಿಗೆ ಹೋಗೋದು ಮುಖ್ಯ’ ಎನ್ನುತ್ತಾರೆ ಶಾರುಖ್.
‘ಬಾಗಿಲಿನಿಂದ ತಾನೇ ಬರೋದು. ನೀವು ನೋಡಿದ್ರೆ ಸೀದಾ ಟೆರೇಸ್ನಿಂದ ಬಂದಿರಲ್ಲ’ ಎನ್ನುತ್ತಾರೆ ರಣಬೀರ್. ‘ನಿಮ್ಮ ಮನೆಯನ್ನು ಗಟ್ಟಿ ಕಟ್ಟಿದ್ದರೆ ಹೀಗೆ ಆಗುತ್ತಲೇ ಇರಲಿಲ್ಲ’ ಎಂದು ಪ್ರತಿಕ್ರಿಯಿಸುತ್ತಾರೆ ಶಾರುಖ್ ಖಾನ್. ಈ ಜಾಹೀರಾತು ಫ್ಯಾನ್ಸ್ಗೆ ಸಖತ್ ಇಷ್ಟ ಆಗಿದೆ. ‘ಜಾಹೀರಾತು ಮಾಡಿದರೆ ಈ ರೀತಿ ಮಾಡಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಈ ರೀತಿ ಜಾಹೀರಾತುಗಳು ನನಗೆ ಇಷ್ಟ. ಎಸ್ಆರ್ಕೆ ಎಂಟ್ರಿ ಸೂಪರ್’ ಎಂದು ಕೆಲವರು ಬರೆದುಕೊಂಡಿದ್ದಾರೆ.
ವೈರಲ್ ಆದ ಜಾಹೀರಾತು..
Alia Bhatt,Shah Rukh Khan and Ranbir Kapoor for @RungtaSteel #AliaBhatt #SRK #RanbirKapoor pic.twitter.com/rnHXygHoMh
— Alia’s nation (@Aliasnation) February 14, 2024
ಈ ಮೊದಲಯ ಕೂಡ ಇದೇ ರೀತಿಯ ಜಾಹೀರಾತು ಬಂದಿತ್ತು. ಆಲಿಯಾ ಭಟ್ ಅವರು ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಶನಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಣಬೀರ್ ಕಪೂರ್ ‘ಬರ್ಫಿ’ ಪಾತ್ರ ಆಡಿದ್ದರು. ಶಾರುಖ್ ಖಾನ್ ಅವರು ಜವಾನ್ ಆಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಕೂಡ ಗಮನ ಸೆಳೆದಿತ್ತು.
ಇದನ್ನೂ ಓದಿ: ಬನ್ಸಾಲಿ ಹೊಸ ಚಿತ್ರಕ್ಕೆ ರಣಬೀರ್ ಕಪೂರ್ ಹೀರೋ; ಶೂಟಿಂಗ್ಗೂ ಮೊದಲೇ ಷರತ್ತುಗಳ ಪಟ್ಟಿ ಇಟ್ಟ ನಟ
ರಣಬೀರ್ ಕಪೂರ್, ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ಮೂವರು ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಶಾರುಖ್ ಖಾನ್ ಅವರು ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಗೆಲುವು ಕಂಡಿದ್ದಾರೆ. ರಣಬೀರ್ ಕಪೂರ್ ಅವರು ‘ಅನಿಮಲ್’ ಚಿತ್ರದಿಂದ ದೊಡ್ಡ ಯಶಸ್ಸಿನ ನಗೆ ಬೀರಿದ್ದಾರೆ. ಆಲಿಯಾ ಭಟ್ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Thu, 15 February 24