ವೈಕುಂಠ ಏಕಾದಶಿ: ತಿರುಪತಿಯ ರಾಜಬೀದಿಗಳಲ್ಲಿ ವೆಂಕಟರಮಣ ಸ್ವಾಮಿಯ ಹೊನ್ನಿನ ರಥೋತ್ಸವ
ವೈಕುಂಠದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಈ ದೃಷ್ಟಿಯಿಂದ ಇವತ್ತು ತಿರುಪತಿಯಲ್ಲಿ ದೇಶದ ಮೂಲೆಲಮೂಲೆಗಳಿಂದ ಬಂದಿರುವ ಲಕ್ಷಾಂತರ ಭಕ್ತರು ನೆರೆದಿದ್ದಾರೆ. ತಿರುಪತಿ ಪಟ್ಟಣದ ರಾಜಬೀದಿಗಳ ಇಕ್ಕೆಲಗಳಲ್ಲಿ ಭಕ್ತರು ನಿಂತು ವೆಂಕಟರಮಣ ಮತ್ತು ಲಕ್ಷ್ಮಿ ಪದ್ಮಾವತಿಯ ರಥೋತ್ಸವ ವೀಕ್ಷಿಸುತ್ತಿದ್ದಾರೆ
ತಿರುಪತಿ: ವೈಕುಂಠ ಏಕಾದಶಿಯ ಪ್ರಯುಕ್ತ ತಿರುಪತಿಯಲ್ಲಿ ಸ್ವರ್ಣ ರಥೋತ್ಸವ ನಡೆಯುತ್ತಿದೆ ಮತ್ತು ಬುಧವಾರ ರಾತ್ರಿಯಿಂದ ಅಲ್ಲಿರುವ ನಮ್ಮ ವರದಿಗಾರ ತಿರುಪತಿಯ ಬೀದಿಗಳಲ್ಲಿ ವೆಂಕಟರಮಣನು ರಥದಲ್ಲಿ ಸಾಗುತ್ತಿರುವ ದೃಶ್ಯಗಳನ್ನು ವಿವರಿಸಿದ್ದಾರೆ. ಲಕ್ಷ್ಮಿ ಪದ್ಮಾವತಿಯೊಂದಿಗೆ ವೆಂಕಟರಮಣ ಸ್ವಾಮಿಯು ಬಂಗಾರದ ರಥದಲ್ಲಿ ವಿರಾಜಮಾನನಾಗಿ ತಿರುಪತಿಯ ರಾಜಬೀದಿಗಳಲ್ಲಿ ಸಾಗಿಬರುತ್ತಿರುವ ದೃಶ್ಯ ನಯನಮನೋಹರ. ಅಂದಹಾಗೆ ಈ ರಥವನ್ನು ಸಂಪೂರ್ಣವಾಗಿ ಬಂಗಾರದಿಂದ ನಿರ್ಮಿಸಲಾಗಿದೆ. ಭಕ್ತರ ಗೋವಿಂದ ಗೋವಿಂದಾ ಜಯಘೋಷಗಳ ನಡುವೆ ವೆಂಕಟರಮಣ ಸ್ವಾಮಿಯನ್ನು ಹೊತ್ತ ಹೊನ್ನಿನ ರಥ ಮುಂದೆ ಸಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೈಕುಂಠ ಏಕಾದಶಿ: ಮದ್ದೂರಿನ ಉಗ್ರನರಸಿಂಹ ದೇವಸ್ಥಾನ ಭಕ್ತರ ದಂಡು, ದೇವರಿಗೆ ವಿಶೇಷ ಪೂಜೆ
Published on: Jan 10, 2025 12:54 PM