ನೆಲಮಂಗಲ: ಹನುಮಂತಪುರ ಗೇಟ್ ಬಳಿ ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್

Updated on: Jun 21, 2025 | 12:03 PM

ನೆಲಮಂಗಲದ ಹನುಮಂತಪುರ ಗೇಟ್ ಬಳಿ ಲಾರಿಯೊಂದು ಹೆದ್ದಾರಿ ಮಧ್ಯೆಯೇ ಪಲ್ಟಿಯಾದ ಪರಿಣಾಮ ಐದಾರು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರು ತಾಸುಗಟ್ಟಲೆ ಪರದಾಡುವಂತಾಯಿತು. ನೆಲಮಂಗಲ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಿದರು. ಟ್ರಾಫಿಕ್ ಜಾಮ್ ವಿಡಿಯೋ ಇಲ್ಲಿದೆ.

ನೆಲಮಂಗಲ, ಜೂನ್ 21: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿಯಾದ ಕಾರಣ 5-6 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರ ಹರಸಾಹಸಪಟ್ಟರು. ಶುಕ್ರವಾರ ಸಹ ಇದೇ ಸ್ಥಳದಲ್ಲಿ ಒಂದು ಲಾರಿ ಪಲ್ಟಿಯಾಗಿತ್ತು. ಇಂದು ಅದೇ ಸ್ಥಳದಲ್ಲಿ ಮತ್ತೊಂದು ಲಾರಿ ಪಲ್ಟಿಯಾಗಿ ವಾಹನ ಸವಾರರು ಪರದಾಡುವಂತಾಯಿತು.

ವರದಿ, ವಿಡಿಯೋ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ