ಚಿತ್ರರಂಗದ ನಂಟು ಇಲ್ಲದ ರಚನಾ ಇಂದರ್​ ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

‘ಲವ್​ 360’ ಚಿತ್ರದಿಂದ ನಟಿ ರಚನಾ ಇಂದರ್​ ಅವರ ಜನಪ್ರಿಯತೆ ಹೆಚ್ಚಿದೆ. ತಾವು ಚಿತ್ರರಂಗಕ್ಕೆ ಬಂದಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ.

TV9kannada Web Team

| Edited By: Madan Kumar

Aug 20, 2022 | 7:30 AM

ನಟಿ ರಚನಾ ಇಂದರ್ (Rachana Inder)​ ಅವರಿಗೆ ಚಿತ್ರರಂಗದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ‘ಲವ್​ ಮಾಕ್ಟೇಲ್​’ (Love Mocktail) ಸಿನಿಮಾದಿಂದ ಗೆಲುವು ಪಡೆದ ಅವರು ಈಗ ‘ಲವ್​ 360’ (Love 360) ಚಿತ್ರದಲ್ಲೂ ಗಮನಾರ್ಹವಾಗಿ ನಟಿಸಿದ್ದಾರೆ. ಅವರ ಕುಟುಂಬದ ಬೇರೆ ಯಾರೂ ಚಿತ್ರರಂಗದಲ್ಲಿ ಇಲ್ಲ. ಬಣ್ಣದ ಲೋಕದ ಟಚ್​ ಇಲ್ಲದ ಅವರು ಮೊದಲು ಮಾಡೆಲಿಂಗ್​ ಮಾಡುತ್ತಿದ್ದರು. ಬಳಿಕ ನಟನೆಯಲ್ಲಿ ತರಬೇತಿ ಪಡೆದುಕೊಂಡರು. ಒಟ್ಟಾರೆ ತಾವು ಸಾಗಿಬಂದ ಹಾದಿ ಹೇಗಿತ್ತು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ‘ಟಿವಿ9 ಕನ್ನಡ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ರಚನಾ ಇಂದರ್​ ಮಾತನಾಡಿದ್ದಾರೆ.

 

Follow us on

Click on your DTH Provider to Add TV9 Kannada