ದರ್ಶನ್ ದೆಸೆಯಿಂದ ಸಿಕ್ಕ ‘ಜೊತೆ-ಜೊತೆಯಲಿ’ ಸಿನಿಮಾ ನೆನಪಿಸಿಕೊಂಡ ಪ್ರೇಮ್

|

Updated on: Feb 18, 2024 | 6:46 PM

Darshan-Prem: ದರ್ಶನ್​ರ ಅವರ ಹೋಂ ಬ್ಯಾನರ್​ ನಲ್ಲಿ ನಿರ್ಮಾಣವಾದ ‘ಜೊತೆ-ಜೊತೆಯಲಿ’ ಸಿನಿಮಾದ ನಾಯಕನಾಗುವ ಅವಕಾಶ ದೊರಕಿದ್ದು ಹೇಗೆ ಅದಕ್ಕೆ ದರ್ಶನ್ ಹೇಗೆ ಕಾರಣರಾದರು ಎಂಬ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ.

ದರ್ಶನ್ ತೂಗುದೀಪ (Darshan Thoogudeepa) ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿವೆ. ಈ 25 ವರ್ಷಗಳಲ್ಲಿ ತಾವು ಸ್ಟಾರ್ ಆಗಿ ಬೆಳೆಯುವ ಜೊತೆಗೆ, ತಮ್ಮೊಟ್ಟಿಗೆ ಕೆಲವು ಕಲಾವಿದರನ್ನು, ತಂತ್ರಜ್ಞರನ್ನು ಬೆಳೆಸಿದ್ದಾರೆ. ದರ್ಶನ್​, ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಖುಷಿಗೆ ನಿನ್ನೆ (ಫೆಬ್ರವರಿ 17) ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಟಿವಿ9 ಜೊತೆಗೆ ಮಾತನಾಡಿದ ನಟ ಪ್ರೇಮ್, ತಮ್ಮ ಹಾಗೂ ದರ್ಶನ್ ಜೊತೆಗಿನ ನಂಟಿನ ಬಗ್ಗೆ ಮಾತನಾಡಿದರು. ದರ್ಶನ್​ರ ಸ್ವಂತ ನಿರ್ಮಾಣ ಸಂಸ್ಥೆಯಿಂದ ಮಾಡಲಾದ ಮೊದಲ ಸಿನಿಮಾ ‘ಜೊತೆ-ಜೊತೆಯಲಿ’ ಹೀರೋ ಆಯ್ಕೆ ಆಗಿದ್ದು ಹೇಗೆ? ಅದಕ್ಕೆ ದರ್ಶನ್ ಹೇಗೆ ಕಾರಣವಾದರು ಎಂಬ ಬಗ್ಗೆ ನಟ ಪ್ರೇಮ್ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ