ಹೊಸ ಸಿಲಿಂಡರ್​​ ಜೋಡಿಸುವ ವೇಳೆ ಅವಘಡ: ಭೀಕರ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ

Edited By:

Updated on: Apr 01, 2026 | 11:35 AM

ಬೆಂಗಳೂರಿನ ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಅವಘಡ ನಡೆದಿದ್ದು, ಹೊಸ ಸಿಲಿಂಡರ್​​ ಜೋಡಿಸುವ ವೇಳೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಬೆಂಗಳೂರು, ಏಪ್ರಿಲ್​​ 01: ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ವರದಿಯಾಗಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಿವೆ. ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಅವಘಡ ನಡೆದಿದ್ದು, ಹರಗಯ್ಯ ಎಂಬುವವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಒಂದು ಗಂಟೆ ಮುನ್ನ ಹೊಸ ಎಲ್‌ಪಿಜಿ ಸಿಲಿಂಡರ್ ಬಂದಿತ್ತು. ಅದನ್ನು ಜೋಡಿಸುವ ವೇಳೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯವರು ತಕ್ಷಣ ಹೊರಬಂದಿದ್ದು, ಹರಗಯ್ಯ ಪತ್ನಿ ಭಾಗ್ಯಮ್ಮ ಮತ್ತು ಮಕ್ಕಳು ಸೇರಿ ಐವರು ಮನೆಯಲ್ಲಿ ವಾಸವಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us