AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

LPG Cylinder Price in Karnataka: ಇಂದಿನಿಂದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ದರ 195.50 ರೂ. ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಈ ದರ ಏರಿಕೆಯಿಂದ ಸಿಲಿಂಡರ್​​ ಅಭಾವದ ನಡುವೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಂತಹ ವಾಣಿಜ್ಯ ಬಳಕೆದಾರರಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಲಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ.

Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ
ಕಮರ್ಷಿಯಲ್​​ ಸಿಲಿಂಡರ್​​ ದರ ಹೆಚ್ಚಳ Image Credit source: Google
ಪ್ರಸನ್ನ ಹೆಗಡೆ
| Edited By: |

Updated on:Apr 01, 2026 | 9:39 AM

Share

ನವದೆಹಲಿ, ಏಪ್ರಿಲ್​​ 01: ಕಮರ್ಷಿಯಲ್​​ ಸಿಲಿಂಡರ್​​ ಅಭಾವದ ನಡುವೆ ಬಳಕೆದಾರರಿಗೆ ಮತ್ತೊಂದು ಶಾಕ್​​ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಕಾರಣ, ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳವಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್‌ ಬೆಲೆ 114.5 ರೂ. ಏರಿಕೆಯಾಗಿತ್ತು.

ಯುದ್ಧದ ಕಾರಣಕ್ಕೆ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ LPG ಪೂರೈಕೆ ಬಹಳ ವ್ಯತ್ಯಾಸವಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಡುವೆ, ಸಿಲಿಂಡರ್​​ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಸುಮಾರು ಶೇ. 50ರವರೆಗೆ ಏರಿಕೆಯಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರ ಆಧರಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ಮತ್ತು ATF ದರಗಳನ್ನು ಪರಿಷ್ಕರಿಸುತ್ತವೆ. ಅದೇ ರೀತಿ ಇಂದಿನಿಂದ ಕಮರ್ಷಿಯಲ್​​ ಸಿಲಿಂಡರ್​​ ಬೆಲೆಯಲ್ಲೂ ಪರಿಷ್ಕರಣೆಯಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ ನಡುವೆ ಗ್ಯಾಸ್ ಬುಕಿಂಗ್ ನಿಯಮ ಬದಲಿಸಿದ ಕೇಂದ್ರ , ಸಿಲಿಂಡರ್ ಬುಕ್ ಮಾಡಿದ್ರೆ ಎಷ್ಟು ದಿನ ಕಾಯ್ಬೇಕು?

ನಗರವಾರು ಹೊಸ ದರಗಳು

  • ದೆಹಲಿ – 2078.50 ರೂ.
  • ಕೊಲ್ಕತ್ತಾ – 2208.00 ರೂ.
  • ಮುಂಬೈ –2031.00 ರೂ.
  • ಚೆನ್ನೈ –2246.50 ರೂ.

ಗೃಹ ಬಳಕೆಯ LPG ದರದಲ್ಲಿಲ್ಲ ಬದಲಾವಣೆ

ಮಾರ್ಚ್ 7ರಂದು 60 ರೂ. ಏರಿಕೆಯಾದ ನಂತರ, ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಹೆಚ್ಚಳವಾಗಿರೋದು ಕಮರ್ಷಿಯಲ್​​ ಸಿಲಿಂಡರ್​​ಗಳ ದರ ಮಾತ್ರವಾಗಿದೆ. ಫೆಬ್ರವರಿ 28ರಂದು ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಾಮೆನೇಯಿ ಸಾವಿನ ನಂತರ ಪರಿಸ್ಥಿತಿ ಗಂಭೀರಗೊಂಡಿದೆ. ಇದರ ಪರಿಣಾಮವಾಗಿ ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಸಾಗುವ ಜಾಗತಿಕ ತೈಲ ಸಾಗಾಟಕ್ಕೂ ಅಡ್ಡಿಯಾಗಿದೆ. ಈ ಮಾರ್ಗದ ಮೂಲಕ ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಾಟವಾಗುವುದರಿಂದ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ.

ಸುದ್ದಿಗೆ ಸಂಬಂಧಿಸಿದ ಪ್ರಶ್ನೆ ಉತ್ತರ

ಪ್ರ: ಯಾವ ಗ್ಯಾಸ್​ ಸಿಲಿಂಡರ್​ ಬೆಲೆ ಹೆಚ್ಚಳವಾಗಿದೆ?

ಉ: ವಾಣಿಜ್ಯ ಬಳಕೆಯ LPG ಸಿಲಿಂಡರ್‌​​ ಬೆಲೆ ಹೆಚ್ಚಳವಾಗಿದೆ.

ಪ್ರ: ವಾಣಿಜ್ಯ ಬಳಕೆಯ LPG ಸಿಲಿಂಡರ್‌​​ ಬೆಲೆ ಎಷ್ಟು ಹೆಚ್ಚಳವಾಗಿದೆ?

ಉ: ವಾಣಿಜ್ಯ ಬಳಕೆಯ LPG ಸಿಲಿಂಡರ್‌​​ ಬೆಲೆ 195.50 ರೂ. ಹೆಚ್ಚಳವಾಗಿದೆ.

ಪ್ರ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಹೆಚ್ಚಳವಾಗಲು ಕಾರಣವೇನು?

ಉ: ಇಸ್ರೇಲ್​ ಇರಾನ್​ ಯುದ್ದ ನಡೆಯುತ್ತಿರುವುದರ ಪರಿಣಾಮ ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಹೆಚ್ಚಳವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:26 am, Wed, 1 April 26

Follow Us
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ