ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್ ಸ್ಫೋಟ: ಮನೆ ಛಿದ್ರಛಿದ್ರ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ಸಿಲಿಂಡರ್ ಬದಲಾಯಿಸುವಾಗ ಅನಿಲ ಸೋರಿಕೆಯಾಗಿ ಭೀಕರ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮಹಿಳೆ, ಆಕೆಯ ಪುತ್ರ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿದ್ದು, ಗಾಯಾಳುಗಳಿಗೆ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ, ಮಾರ್ಚ್ 30: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು

