ಚಿತ್ರದುರ್ಗ: ಡಿಕೆ ಶಿವಕುಮಾರ ಸ್ವಾಗತಕ್ಕೆ ನಿಂತ ಕಾಂಗ್ರೆಸ್ ನಾಯಕರ ಜೇಬಿಗೆ ಕೈ ಹಾಕಿ ಸಿಕ್ಕಿಬಿದ್ದ ಪಿಕ್ ಪಾಕೆಟ್

Edited By:

Updated on: Nov 28, 2022 | 5:05 PM

ಚಿತ್ರದುರ್ಗ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ ಅವರನ್ನು ಸ್ವಾಗತಿಸಲು ನೆರೆದಿದ್ದ ಸ್ಥಳೀಯ ಮುಖಂಡರ ಜೇಬಿಗೆ ಕೈ ಹಾಕಿ ಈ ಪಿಕ್ ಪಾಕೆಟ್ ಸಿಕ್ಕಿಬಿದ್ದಿದ್ದಾನೆ.

ಚಿತ್ರದುರ್ಗ: ರಾಜಕೀಯ ಮುಖಂಡರು (political leaders) ನಡೆಸುತ್ತಿರುವ ಯಾತ್ರೆಗಳಿಂದ ಜನರಿಗೆ ಉಪಯೋಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ, ಆದರೆ ಪಿಕ್ ಪಾಕೆಟ್ ಗಳಿಗೆ (pick pockets) ಉಪಯೋಗವಾಗುತ್ತಿರುವುದಂತೂ ಸತ್ಯ. ಆದರೆ, ಕೆಲ ಅದೃಷ್ಟಹೀನರು ಜನರ ಕೈಗೆ ಸಿಕ್ಹಾಕಿಕೊಂಡು ಜೈಲು ಸೇರುತ್ತಿದ್ದಾರೆ. ಚಿತ್ರದುರ್ಗ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ (DK Shivakumar) ಅವರನ್ನು ಸ್ವಾಗತಿಸಲು ನೆರೆದಿದ್ದ ಸ್ಥಳೀಯ ಮುಖಂಡರ ಜೇಬಿಗೆ ಕೈ ಹಾಕಿ ಈ ಪಿಕ್ ಪಾಕೆಟ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಸ್ಟೇಶನ್ ಗೆ ಕರೆದೊಯ್ಯುವಾಗ ತನ್ನ ಮಕ್ಕಳ ಮೇಲೆ ಆಣೆ ಮಾಡಿ ತಾನು ಕಳ್ಳನಲ್ಲ ಅಂತ ಗೋಗರೆಯುತ್ತಿದ್ದಾನೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ