ರೌಡಿ ಶೀಟರ್ಗೆ ಟಿಕೆಟ್: ಸಚಿವ ಸಿಎನ್ ಅಶ್ವಥ್ ನಾರಾಯಣ ಸೈಲೆಂಟ್ ಸುನೀಲನನ್ನು ಸಮರ್ಥಿಸಿಕೊಂಡಿದ್ದು ಆಶ್ಚರ್ಯ ಮೂಡಿಸುತ್ತದೆ!
ಸಂಪುಟದ ಹಿರಿಯ ಸಚಿವರಲ್ಲಿ ಒಬ್ಬರಾಗಿರುವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಇವತ್ತು ಸಾರ್ವಜನಿಕವಾಗಿ ಎಡಿಜಿಪಿ ಅಲೋಕ್ ಕುಮಾರ ಅವರಿಂದ ಉಗಿಸಿಕೊಂಡ ಸುನೀಲನನ್ನು ಸಮರ್ಥಿಸಿಕೊಂಡ ರೀತಿ ಆಶ್ಚರ್ಯ ಹುಟ್ಟಿಸುತ್ತದೆ.
ಬೆಂಗಳೂರು: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷಕ್ಕೆ ಯೋಗ್ಯ ಮತ್ತು ಸಚ್ಛಾರಿತ್ರ್ಯ ಹೊಂದಿದ ಅಭ್ಯರ್ಥಿಗಳ ಕೊರತೆ ಎದುರಾದಂತೆ ಕಾಣುತ್ತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಹಿಂದೆ ರೌಡಿ ಶೀಟರ್ ಆಗಿದ್ದ ಮತ್ತು ಜೈಲಿನಲ್ಲಿ ಕೆಲ ವರ್ಷಗಳನ್ನು ಕಳೆದಿದ್ದ ಸೈಲೆಂಟ್ ಸುನಿಲನಿಗೆ (Silent Sunil) ಟಿಕೆಟ್ ನೀಡುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಂತಿದೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಪುಟದ ಹಿರಿಯ ಸಚಿವರಲ್ಲಿ ಒಬ್ಬರಾಗಿರುವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಇವತ್ತು ಸಾರ್ವಜನಿಕವಾಗಿ ಎಡಿಜಿಪಿ ಅಲೋಕ್ ಕುಮಾರ ಅವರಿಂದ ಉಗಿಸಿಕೊಂಡ ಸುನೀಲನನ್ನು ಸಮರ್ಥಿಸಿಕೊಂಡ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಅವರು ಹೇಳುವುದನ್ನು ಕೇಳಿಸಿಕೊಳ್ಳಿ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos