ಭಯೋತ್ಪಾದನೆಗೆ ಹಣ ಸಂಗ್ರಹಕ್ಕಾಗಿ ಡಕಾಯಿತಿ ಮಾಡುತ್ತಿದ್ದ 3 ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಕ್ಕಾಗಿ ಡಕಾಯಿತಿ ಮಾಡುತ್ತಿದ್ದ ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಕ್ಕಾಗಿ ಡಕಾಯಿತಿ ಮಾಡುತ್ತಿದ್ದ ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನಜೀರ್ ಶೇಖ್ – 7 ವರ್ಷ ಸಜೆ ಹಾಗೂ 48 ಸಾವಿರ ರೂ ದಂಡ, ಹಬೀಬುರ್ ರೆಹಮಾನ್ – 7 ವರ್ಷ ಸಜೆ ಹಾಗೂ 49 ಸಾವಿರ ರೂ ದಂಡ ಹಾಗೂ ಮೊಸ್ರಫ್ ಹೊಸೈನ್ – 7 ವರ್ಷ ಸಜೆ ಹಾಗೂ 41 ಸಾವಿರ ರೂ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಇದನ್ನೂ ಓದಿ: ಖತರ್ನಾಕ್ ಮರ್ಡರ್ ಸ್ಟೋರಿ! ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೆಸಿಕೊಂಡಿದ್ದ ಪ್ರೇಯಸಿ ಮಾಡಿದ್ದು ಏನು ಗೊತ್ತಾ?
ಮೂವರು ಆರೋಪಿಗಳು ಬಾಂಗ್ಲಾದೇಶ್ದ ಜಮಾತ್ ಉಲ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದಾರೆ. ಮೂವರಲ್ಲಿ ಹಬೀಬುರ್ ರೆಹಮಾನ್ ಎಂಬುವ 2014ರ ಬುರ್ದ್ವಾನ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದನು.
ಈ ಆರೋಪಿಗಳು 2018ರಲ್ಲಿ ಬೆಂಗಳೂರಿನ ಅತ್ತಿಬೆಲೆಯ 2, ಕೆ.ಆರ್.ಪುರಂ, ಕೊತ್ತನೂರಿನ ತಲಾ 1 ಮನೆಗಳಲ್ಲಿ ಡಕಾಯಿತಿ ಮಾಡಿದ್ದರು. ಡಕಾಯಿತಿ ಮಾಡಿದ ಹಣದಲ್ಲಿ ಸ್ಪೋಟಕ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. 2019 ರಲ್ಲಿ ಚಿಕ್ಕಬಾಣಾವರ ಬಳಿ ಮನೆಯೊಂದರಲ್ಲಿ ಹಬೀಬುರ್ ನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬೈಕ್ ಸವಾರರಿಬ್ಬರ ದುರ್ಮರಣ
ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು
ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಜಾಜ್, ಅರಾಫತ್ ಬಂಧಿತ ಆರೋಪಿಗಳು. ನೈಜೀರಿಯಾ ಮೂಲದವಾರದ ಇಬ್ಬರು ಆರೋಪಿಗಳು ಡ್ರಗ್ಸ್ ಖರೀದಿಸಿ ಮಾರಾಟ ಮಾರುತ್ತಿದ್ದರು. ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ನ್ನು ಜಪ್ತಿ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Mon, 28 November 22