ಯಾದಗಿರಿ: ಗಾಂಜಾ ಬೆಳೆದಿದ್ದ ಜಮೀನುಗಳ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ, ಇಬ್ಬರು ವಶಕ್ಕೆ
ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಬೆಳೆದಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದು 3 ಕೆಜಿ ಒಣ ಗಾಂಜಾ, 3 ಕೆಜಿ ಹಸಿ ಗಾಂಜಾ ಜಪ್ತಿ ಮಾಡಲಾಗಿದೆ.
ಯಾದಗಿರಿ: ಶಹಾಪುರ ಹಾಗೂ ಸುರಪುರ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ 4 ಕಡೆ ದಾಳಿ ನಡೆಸಿದ್ದಾರೆ. ವಿವಿಧ ಕಡೆ ಗಾಂಜಾ ಬೆಳೆದ ಜಮೀನುಗಳ ಮೇಲೆ ದಾಳಿ ನಡೆಸಿದ್ದು ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಉಳ್ಳೇಸುಗುರದಲ್ಲಿ 3 ಕಡೆ, ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಬೆಳೆದಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದು 3 ಕೆಜಿ ಒಣ ಗಾಂಜಾ, 3 ಕೆಜಿ ಹಸಿ ಗಾಂಜಾ ಜಪ್ತಿ ಮಾಡಲಾಗಿದೆ.
ಸಚಿವ ಹಾಲಪ್ಪ ಆಚಾರ್ ಕ್ಷೇತ್ರದಲ್ಲೇ ಕಳಪೆ ರಸ್ತೆ ಕಾಮಗಾರಿ
ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕ್ಷೇತ್ರದಲ್ಲಿ ಕಳಪೆ ರಸ್ತೆ ನಿರ್ಮಾಣ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕಾಮಗಾರಿ ನಡೆದ ಎರಡೇ ದಿನದಲ್ಲಿ ಡಾಂಬರ್ ರಸ್ತೆ ಕಿತ್ತುಹೋಗಿದೆ. ಹೀಗಾಗಿ ಕುದರಿಮೋತಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
1.20 ಕೋಟಿ ರೂಪಾಯಿ ವೆಚ್ಚದಲ್ಲಿ ಕುದರಿಮೋತಿಯಿಂದ ಚಂಡಿಹಾಳ ಗ್ರಾಮಕ್ಕೆ ಸಂಪರ್ಕಿಸುವ ರ ರಸ್ತೆ ಕಾಮಗಾರಿ ಮಾಡಲಾಗಿತ್ತು. ಆದ್ರೆ ಕಾಮಗಾರಿ ನಡೆದ ಎರಡೇ ದಿನಕ್ಕೆ ರಸ್ತೆ ಕಿತ್ತು ಬಂದಿದೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆ; ಚಳಿಯೂ ಹೆಚ್ಚಳ
ಸಾಲ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ರೈತ ಲಿಂಗೇಗೌಡ(72) ಎಂಬುವವರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ. 4 ಎಕರೆ 13 ಗುಂಟೆ ಜಮೀನು ಹೊಂದಿದ್ದ ರೈತ ಲಿಂಗೇಗೌಡ, ₹2 ಲಕ್ಷ ಸಾಲಕ್ಕೆ ಕಾವೇರಿ ಗ್ರಾಮೀಣ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪಡೆದ ಸಾಲ ತೀರಿಸಿಲ್ಲ ಎಂದು ಬ್ಯಾಂಕ್ ಸಾಲ ನಿರಾಕರಿಸಿತ್ತು. ಇದರಿಂದ ಮನನೊಂದು ಬ್ಯಾಂಕ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ರೈತ ಲಿಂಗೇಗೌಡನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 9:43 am, Thu, 24 November 22