ನ.12ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರ ವಲಯದ ಶಿಂಗಳಾಪುರ ಬ್ರಿಡ್ಜ್‌ನಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ಗೋಕಾಕ್ ಶಹರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ನಿಶ್ಚಿತಾರ್ಥವಾಗಿದ್ದ ಯುವತಿ ಜತೆಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೊಲೆ ಮಾಡಿರುವುದು ಬಯಲಾಗಿದೆ. ಯುವತಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿಯ ಕುಟುಂಬಸ್ಥರು ಸೇರಿಕೊಂಡು ಈ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ‘ನಿಮಗೆ ಮದುವೆಯಾಗಿದೆಯಾ?’ ಬೆಂಗಳೂರಿನಲ್ಲಿಯೂ ಪ್ರತೀ ಬ್ರೋಕರ್ ಕೇಳುವುದು ಇದನ್ನೇ; ಆಕ್ರೋಶಗೊಂಡ ಮಹಿಳೆ
ಕುಟುಂಬಸ್ಥರು ಯುವತಿಗೆ ಹೆದರಿಸಿ ಸೋಮಲಿಂಗನಿಗೆ ಕರೆ ಮಾಡಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲಾ ಬಾ ಅಂತಾ ಯುವತಿ ಕಡೆಯಿಂದ ಮನೆಗೆ ಕರೆಯಿಸಿಕೊಂಡಿದ್ದಾರೆ. ನಂತರ ಆತನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹಂತಕರು ಸಿಮೆಂಟ್ ಕಂಬಕ್ಕೆ ಮೃತದೇಹವನ್ನು ಕಟ್ಟಿ ಘಟಪ್ರಭಾ ನದಿಗೆ ಎಸೆದಿದ್ದರು. ಮೃತನ ಕೈ ಮೇಲೆ ಮಾಮ್-ಡ್ಯಾಡ್ ಅಂತಾ ಬರೆದ ಟ್ಯಾಟೋ, ಕೈಯಲ್ಲಿದ್ದ ಖಡ್ಗ ನೋಡಿ ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.
ಈ ವೇಳೆ ಸೋಮಲಿಂಗನ ಮೊಬೈಲ್ ಕಾಲ್ ಡಿಟೈಲ್ ತೆಗೆದು ಪರಿಶೀಲನೆ ನಡೆಸಿದ್ದ ಪೊಲೀಸರು, ಕೊನೆಯ ಪೋನ್ ಯುವತಿಯದ್ದು ಬಂದಿದ್ದರಿಂದ ಪ್ರೇಯಸಿಯನ್ನು ವಶಕ್ಕೆ ಪಡೆದಿದ್ದರು. ಪ್ರೇಯಸಿಯನ್ನು ವಶಕ್ಕೆ ಪಡೆದಾಗ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿವಲಿಂಗ ಮತ್ತು ಚಿಕ್ಕಪ್ಪ ಸಂತೋಷ್ ಹೆಸರು ಬಾಯಿ ಬಿಟ್ಟಿದ್ದಳು. ಆಕೆಯ ಹೇಳಿಕೆ ಆಧಾರದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ತಾವೇ ಕೊಲೆ ಮಾಡಿದ್ದಾಗಿ ಹಂತಕರು ಒಪ್ಪಿಕೊಂಡಿದ್ದಾರೆ.