ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಕಳ್ಳನ ಕೈಚಳಕ: ಏಳು ವೈದ್ಯರ ಬ್ಯಾಗ್ ಎಗರಿಸಿದ ಕಳ್ಳ

TV9kannada Web Team

TV9kannada Web Team | Edited By: Kiran Hanumant Madar

Updated on: Nov 28, 2022 | 10:34 PM

ಮಡಿಕೇರಿ ನಗರದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ‌ ಸಂಸ್ಥೆಯಲ್ಲಿ ಕಳ್ಳ ವೈದ್ಯರ ಬ್ಯಾಗ್​ನ್ನು ಕದ್ದೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಡಿಕೇರಿ: ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಕಳ್ಳನೊಬ್ಬ ಕೈಚಳಕ ತೋರಿಸಿದ್ದಾನೆ.  ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾಸ್ಪತ್ರೆಗೆ ಮಾಸ್ಕ್​ ಧರಿಸಿ ಬಂದ ಕಳ್ಳನೊಬ್ಬ ಬರೋಬ್ಬರಿ ಏಳು ವೈದ್ಯರ ಬ್ಯಾಗ್​ ಕದ್ದು ಎಸ್ಕೇಪ್​ ಆಗಿದ್ದಾನೆ. ಕಳ್ಳನ ಕೈಚಳಕವು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಇದರ ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಒಂದು ಬೈಕ್​ನ್ನು  ಸಹ ಕದ್ದು ಎಸ್ಕೇಪ್​ ಆಗಿದ್ದಾನೆ. ಈ ಬಗ್ಗೆ ಮಡಿಕೇರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada