ಸೇನೆಯಲ್ಲಿ ದೇಶಸೇವೆ ಮಾಡಿ, ತವರಿಗೆ ಮರಳಿದ ಯೋಧನಿಗೆ ಮೆರವಣಿಗೆ ಮೂಲಕ ಸ್ವಾಗತ

| Updated By: ಸಾಧು ಶ್ರೀನಾಥ್​

Updated on: Jan 04, 2024 | 11:29 AM

ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ತರವರಿಗೆ ಮರಳಿದ ಸೈನಿಕನಿಗೆ (Veteran soldier) ಅದ್ದೂರಿ ಸ್ವಾಗತ ಕೋರಲಾಗಿದೆ. ಮಾದೇನಹಳ್ಳಿ ಗ್ರಾಮದ ಎಂ. ಶ್ರೀನಿವಾಸ ಎಂಬ ಯೋಧ ದೀರ್ಘ ದೇಶಸೇವೆ ಮಾಡಿ, ತವರಿಗೆ ಮರಳಿದ್ದಾರೆ. ಸೈನಿಕ ಶ್ರೀನಿವಾಸ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ‌ ಮಾದೇ‌ನಹಳ್ಳಿ ಗ್ರಾಮದ ನಿವಾಸಿ.

ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ತರವರಿಗೆ ಮರಳಿದ ಸೈನಿಕನಿಗೆ (Veteran soldier) ಅದ್ದೂರಿ ಸ್ವಾಗತ (welcome) ಕೋರಲಾಗಿದೆ. ಮಾದೇನಹಳ್ಳಿ ಗ್ರಾಮದ ಎಂ. ಶ್ರೀನಿವಾಸ ಎಂಬ ಯೋಧ ದೀರ್ಘ ದೇಶಸೇವೆ ಮಾಡಿ, ತವರಿಗೆ ಮರಳಿದ್ದಾರೆ. ಸೈನಿಕ ಶ್ರೀನಿವಾಸ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ‌ (Channagiri taluk of Davangere) ಮಾದೇ‌ನಹಳ್ಳಿ ಗ್ರಾಮದ ನಿವಾಸಿ. ಚನ್ನಗಿರಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಸೈನಿಕ ಶ್ರೀನಿವಾಸ ಅವರ ಮೆರವಣಿಗೆ ಮಾಡಲಾಯಿತು. ಚನ್ನಗಿರಿ ಪಟ್ಟಣದಿಂದ ಸೈನಿಕನ ಸ್ವಗ್ರಾಮ‌ ಮಾದೇನಹಳ್ಳಿವರೆಗೆ ಮೆರವಣಿಗೆ ನಡೆಯಿತು. ಪಂಜಾಬ್, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಗಡಿಯಲ್ಲಿ ಸೈನಿಕ ಶ್ರೀನಿವಾಸ ಸೇವೆ ಸಲ್ಲಿಸಿದ್ದಾರೆ. ಕೇದಾರಲಿಂಗ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಸಂಸದ ಜಿಎಂ‌ ಸಿದ್ದೇಶ್ವರ, ಬಿಜೆಪಿ ಮುಖಂಡ ಎಚ್ ಎಸ್ ಶಿವಕುಮಾರ ಮುಂತಾದ ಪ್ರಮುಖರಿಂದ ತವರಿಗೆ ಮರಳಿದ ಸೈನಿಕನಿಗೆ ಶುಭ ಕೋರಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 04, 2024 11:29 AM