ಮದ್ದೂರು ಗಣೇಶ ಗಲಾಟೆಯಲ್ಲಿ ಲಾಠಿ ಏಟು ತಿಂದ ಹಿಂದೂ ಕಾರ್ಯಕರ್ತೆಗೆ ಸಂಕಷ್ಟ
ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ ಹಿಂದೂ ಕಾರ್ತಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಆ ವೇಲೆ ಜ್ಯೋತಿ ಎನ್ನುವ ಯುವತಿಗೂ ಸಹ ಲಾಠಿ ಏಟು ಬಿದ್ದಿದ್ದು, ನೋವಿನಲ್ಲಿ ಯುವತಿ ರಸ್ತೆ ಮೇಲೆಯೇ ಕಿರುಚಾಡಿ, ಗೋಗರೆದಿದ್ದಾಳೆ. ಅಲ್ಲದೇ ಹಣೆ ಹಣೆ ಬಡಿದುಕೊಂಡು ಪೊಲೀಸರಿಗೆ ಇಡೀ ಶಾಪ ಹಾಕುತ್ತ ಕಣ್ಣೀರು ಹಾಕಿದ್ದಳು. ಅಲ್ಲದೇ ಸಿಎಂ ಸಿದ್ದರಾಮಯ್ಯಗೆ ಬೈದಿದ್ದಳು. ಸದ್ಯ ಜ್ಯೋತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಲ್ಲದೇ ಈಕೆಯೆ ರೀಲ್ಸ್ ಗಳು ಸಹ ವೈರಲ್ ಆಗಿವೆ. ಸದ್ಯ ಸೋಷಿಯಲ್ ಮೀಡಿಯಾನಲ್ಲಿ ಮಿಂಚುತ್ತಿರುವ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಡ್ಯ, (ಸೆಪ್ಟೆಂಬರ್ 11): ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ )Maddur Ganesh Stone Pelting Case ಖಂಡಿಸಿ ಹಿಂದೂ ಕಾರ್ತಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಆ ವೇಲೆ ಜ್ಯೋತಿ ಎನ್ನುವ ಯುವತಿಗೂ ಸಹ ಲಾಠಿ ಏಟು ಬಿದ್ದಿದ್ದು, ನೋವಿನಲ್ಲಿ ಯುವತಿ ರಸ್ತೆ ಮೇಲೆಯೇ ಕಿರುಚಾಡಿ, ಗೋಗರೆದಿದ್ದಾಳೆ. ಅಲ್ಲದೇ ಹಣೆ ಹಣೆ ಬಡಿದುಕೊಂಡು ಪೊಲೀಸರಿಗೆ ಇಡೀ ಶಾಪ ಹಾಕುತ್ತ ಕಣ್ಣೀರು ಹಾಕಿದ್ದಳು. ಅಲ್ಲದೇ ಸಿಎಂ ಸಿದ್ದರಾಮಯ್ಯಗೆ ಬೈದಿದ್ದಳು. ಸದ್ಯ ಜ್ಯೋತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಲ್ಲದೇ ಈಕೆಯೆ ರೀಲ್ಸ್ ಗಳು ಸಹ ವೈರಲ್ ಆಗಿವೆ. ಸದ್ಯ ಸೋಷಿಯಲ್ ಮೀಡಿಯಾನಲ್ಲಿ ಮಿಂಚುತ್ತಿರುವ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು…ಸಿಎಂ ಹಾಗೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮದ್ದೂರು ಠಾಣೆ ಪಿಐ ಶಿವಕುಮಾರ್ ದೂರು ಆಧರಿಸಿ ಮದ್ದೂರಿನ ಶಿವಪುರ ನಿವಾಸಿ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನ್ಯಧರ್ಮದ ಬಗ್ಗೆ ಧಕ್ಕೆಯಾಗುವ ಪದ ಬಳಕೆ, ಕೋಮುಗಳ ನಡುವೆ ಪರಸ್ಪರ ವೈಮನಸ್ಸು ಉಂಟು ಮಾಡುವ ಹೇಳಿಕೆ, ವೈರತ್ವ ಉತ್ತೇಜನ ನೀಡುವ ಆರೋಪದಡಿ ಪ್ರಕರಣ ದಾಖಲಾಗಿದೆ.
