ಪ್ರಿಯಾಂಕಾ ತಿಮ್ಮೇಶ್​ ಮದುವೆ ಆಗೋದು ಯಾವಾಗ? ಉತ್ತರ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ

| Updated By: ರಾಜೇಶ್ ದುಗ್ಗುಮನೆ

Updated on: Feb 24, 2022 | 3:33 PM

ಪ್ರಿಯಾಂಕಾ ತಿಮ್ಮೇಶ್​ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಲಾಕ್​ ಡೌನ್​ ಸಂದರ್ಭದಲ್ಲಿ ಹೀರೋ ಚೀನಾದಲ್ಲಿ ಇರುತ್ತಾನೆ. ಅದೇ ವೇಳೆಗೆ ಕಥಾನಾಯಕಿ ತುಂಬು ಗರ್ಭಿಣಿ ಆಗಿರುತ್ತಾಳೆ. ಇಡೀ ಕಥೆಯನ್ನು ವಿಡಿಯೋ ಕಾಲ್​ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ.

ಬಿಗ್​ ಬಾಸ್​ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್​ (Priyanka Thimmesh) ಹಾಗೂ ಖ್ಯಾತ ನಟ ನಾಗಭೂಷಣ್​ (Nagabhushan) ಅವರು ‘ಮೇಡ್​ ಇನ್​ ಚೈನಾ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಶ್ವಿನ್​ ರಾವ್​ ಪಲ್ಲಕ್ಕಿ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ‘ಮೇಡ್​ ಇನ್​ ಚೈನಾ’ (Made In Chaina) ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್​ ಇದರಲ್ಲಿ ತೋರಿಸಲಾಗಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್​ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಲಾಕ್​ ಡೌನ್​ ಸಂದರ್ಭದಲ್ಲಿ ಹೀರೋ ಚೀನಾದಲ್ಲಿ ಇರುತ್ತಾನೆ. ಅದೇ ವೇಳೆಗೆ ಕಥಾನಾಯಕಿ ತುಂಬು ಗರ್ಭಿಣಿ ಆಗಿರುತ್ತಾಳೆ. ಇಡೀ ಕಥೆಯನ್ನು ವಿಡಿಯೋ ಕಾಲ್​ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ​ಈ ಚಿತ್ರದ ಬಗ್ಗೆ ಮಾತಾಡುವಾಗ ಅವರು ತಾವು ಯಾವಾಗ ಮದುವೆ ಆಗುತ್ತೇವೆ ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ದೇವರಾಜ್​-ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಹೇಗಿದೆ?

‘ನಂಗೆ 4-5 ಮಕ್ಕಳು ಆಗದಿದ್ರೂ ಒಂದೆರಡು ಮಕ್ಕಳು ದತ್ತು ತಗೋಬೇಕು ಅಂತ ಆಸೆ ಇದೆ’: ಪ್ರಿಯಾಂಕಾ ತಿಮ್ಮೇಶ್​