‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು

Updated on: May 22, 2025 | 6:15 PM

ನಟ ಮಡೆನೂರು ಮನು ವಿರುದ್ಧ ಒಂದಷ್ಟು ಆರೋಪಗಳು ಕೇಳಿಬಂದಿವೆ. ಅತ್ಯಾಚಾರದ ಕೇಸ್​​ನಲ್ಲಿ ಮನು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಕೆಲವರ ಸಂಚು ಎಂದು ಮಡೆನೂರು ಮನು ಹೇಳಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ನಟ ಮಡೆನೂರು ಮನು (Madenur Manu) ವಿರುದ್ಧ ಒಂದಷ್ಟು ಆರೋಪಗಳು ಕೇಳಿಬಂದಿವೆ. ಅತ್ಯಾಚಾರದ ಕೇಸ್​​ನಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಕೆಲವರ ಸಂಚು ಎಂದು ಮಡೆನೂರು ಮನು ಹೇಳಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಸಿನಿಮಾ ಬಿಡುಗಡೆಯ ಹಿಂದಿನ ದಿನ ಉದ್ದೇಶಪೂರ್ವಕವಾಗಿ ಎಫ್​ಐಆರ್​ (FIR) ಮಾಡಿದ್ದಾರೆ. ಆಕೆಗೆ ಕೆಲವರು ಹೇಳಿಕೊಟ್ಟು ಈ ರೀತಿ ಮಾಡಿಸಿದ್ದಾರೆ. ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್ ಸೇರಿ 10-12 ಜನ ಇದ್ದಾರೆ. ನನ್ನ ಸಾವು ಬಯಸಿದ್ದರಂತೆ. ಅವನು (ರಾಕೇಶ್ ಪೂಜಾರಿ) ಸಾಯುವ ಬದಲು ಇವನಾದರೂ ಸಾಯಬಾರದಾ ಅಂತ ಮಾತನಾಡುತ್ತಿದ್ದಂತೆ. ನಾನು ಯಾರಿಗೆ ಏನು ಮಾಡಿದ್ದೇನೋ ನನಗೆ ಗೊತ್ತಿಲ್ಲ. ಎಲ್ಲದಕ್ಕೂ ನಾನು ಸಾಕ್ಷಿ ತಂದು ಕೊಡುತ್ತೇನೆ’ ಎಂದು ಮಡೆನೂರು ಮನು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.