ಮಧು ಬಂಗಾರಪ್ಪ 2004 ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪಗೆ ಮಾಡಿದ ಸಹಾಯ ಯಾಕೆ ಹೇಳಿದರೋ ಗೊತ್ತಾಗಲಿಲ್ಲ!

ಮಧು ಬಂಗಾರಪ್ಪ 2004 ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪಗೆ ಮಾಡಿದ ಸಹಾಯ ಯಾಕೆ ಹೇಳಿದರೋ ಗೊತ್ತಾಗಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2024 | 4:39 PM

ಆ ದಿನಗಳಲ್ಲಿ ಬಂಗಾರಪ್ಪ ನಿಸ್ಸಂದೇಹವಾಗಿ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಆಗ ಬಿಜೆಪಿಯಲ್ಲಿದ್ದ ಅವರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯವನ್ನು ಸುತ್ತಬೇಕಿದ್ದರಿಂದ ತನ್ನ ಪರವಾಗಿ ಪ್ರಚಾರ ಮಾಡುವಂತೆ ಯಡಿಯೂರಪ್ಪನವರು ಮಧುವನ್ನು ಕೇಳಿದ್ದರಂತೆ.

ಶಿವಮೊಗ್ಗ: ಇವರಿಬ್ಬರ ತಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಮತ್ತು ಇಬ್ಬರೂ ಶಿವಮೊಗ್ಗ ಜಿಲ್ಲೆಯವರು. ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಎಸ್ ಬಂಗಾರಪ್ಪ (S Bangarappa) ಒಂದು ಕಾಲದಲ್ಲಿ ಜೊತೆಯಾಗಿ ಬಿಜೆಪಿ ಪಕ್ಷಕ್ಕೆ ದುಡಿದವರು. ಅವರ ಮಕ್ಕಳಾದ ಬಿವೈ ವಿಜಯೇಂದ್ರ (BY Vijayendra) ಮತ್ತು ಮಧು ಬಂಗಾರಪ್ಪ (Madhu Bangarappa) ಈಗ ರಾಜಕಾರಣದಲ್ಲಿ ತಮ್ಮ ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಗುರುತಿಸಿಕೊಳ್ಳುವಷ್ಟು ಬೆಳೆದಿದ್ದಾರೆ. ಪ್ರಾರಂಭದಲ್ಲಿ ಮಧು ಮತ್ತು ವಿಜಯೇಂದ್ರ ನಡುವೆ ಗೆಳೆತನ ಸಂಬಂಧ ಹೇಗಿತ್ತು ಅನ್ನೋದು ನಮಗೆ ಗೊತ್ತಿಲ್ಲ, ಆದರೆ ಮಧು ಇಲ್ಲಿ ಹೇಳುತ್ತಿರೋದನ್ನು ಗಮನಿಸಿದರೆ ಅದು ಪ್ರಾಯಶಃ ಸೌಹಾರ್ದಯುತವಾಗಿರಲಾರದು. ಯಾಕೆಂದರೆ, 2004ರ ವಿಧಾನಸಭಾ ಚುನಾವಣೆಯನ್ನು ಮೆಲಕು ಹಾಕುವ ಮಧು, ಷಿಕಾರಿಪುರದಿಂದ ಸ್ಪರ್ಧಿಸಿದ್ದ ಯಡಿಯೂರಪ್ಪ ಪರ ಪ್ರಚಾರ ಮಾಡಿದ್ದನ್ನು ಹೇಳುತ್ತಾರೆ. ಅವರೇ ಹೇಳುವ ಪ್ರಕಾರ ಆಗ ವಿಜಯೇಂದ್ರ ರಾಜ್ಯದಿಂದ ಹೊರಗಿದ್ದರು.

ಆ ದಿನಗಳಲ್ಲಿ ಬಂಗಾರಪ್ಪ ನಿಸ್ಸಂದೇಹವಾಗಿ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಆಗ ಬಿಜೆಪಿಯಲ್ಲಿದ್ದ ಅವರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯವನ್ನು ಸುತ್ತಬೇಕಿದ್ದರಿಂದ ತನ್ನ ಪರವಾಗಿ ಪ್ರಚಾರ ಮಾಡುವಂತೆ ಯಡಿಯೂರಪ್ಪನವರು ಮಧುವನ್ನು ಕೇಳಿದ್ದರಂತೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮಧು ತಪ್ಪಿತಸ್ಥ ಅಂತ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂದು ವಿಜೆಯೇಂದ್ರ ಹೇಳಿರುವುದರಿಂದ ತಾನು ಯಡಿಯೂರಪ್ಪ ಕುಟುಂಬಕ್ಕೆ ಮಾಡಿದ ಉಪಕಾರವನ್ನು ಶಿಕ್ಷಣ ಸಚಿವ ಹೇಳಿಕೊಂಡರು ಅಂತ ಅನಿಸುತ್ತೆ. ಮೋರಲ್ ಆಫ್ ದಿ ಸ್ಟೋರಿ? ಗೊತ್ತಿಲ್ಲ ಮಾರಾಯ್ರೇ, ಮಧು ಅವರನ್ನೇ ಕೇಳ್ಬೇಕು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ