Pahelgam Terrorist Attack; ಉಗ್ರರ ಗುಂಡಿಗೆ ಬಲಿಯಾಗಿರುವ ಆಂಧ್ರದ ಮಧುಸೂದನ್ ಬೆಂಗಳೂರಲ್ಲಿ ನೆಲೆಸಿದ್ದರು: ಸ್ಥಳೀಯ

Updated on: Apr 23, 2025 | 12:36 PM

Pahelgam Terrorist Attack: ಸಾಫ್ಟ್​ವೇರ್ ಉದ್ಯೋಗಿಯಾಗಿದ್ದ ಮಧುಸೂದನ್ ಅವರ ಪತ್ನಿಯೂ ಸಾಫ್ಟ್​ವೇರ್ ಇಂಜಿನೀಯರ್ ಎಂದು ಹಿರಿಯರು ಹೇಳುತ್ತಾರೆ. ಮೃತ ಮಧುಸೂದನ್ ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಜಲ್ಲೆಯ ಕಾವಲಿಯವರು, ಬಹಕ ಚಿಕ್ಕ ವಯಸ್ಸಿನವರು ಎಂದು ಹೇಳುವ ಅವರು ತಾನ್ಯಾವತ್ತೂ ಅವರೊಂದಿಗೆ ಮಾತಾಡಿಲ್ಲ, ಆದರೆ ತನ್ನ ಸೊಸೆಯೊಂದಿಗೆ ಮಾತಾಡುತ್ತಿದ್ದರು ಎನ್ನುತ್ತಾರೆ.

ಬೆಂಗಳೂರು, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಬಲಿಯಾಗಿರುವವರಲ್ಲಿ ಬೆಂಗಳೂರಲ್ಲಿ ಸುಮಾರು ಒಂದೂವರೆ ದಶಕಗಳಿಂದ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಮಧುಸೂದನ್ (Madhusudan) ಸಹ ಒಬ್ಬರು. ಭಾನುವಾರವಷ್ಟೇ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದರಂತೆ. ಬೆಂಗಳೂರಿನ ರಾಮಮೂರ್ತಿನಗರ ನಿವಾಸಿಯಾಗಿದ್ದ ಮಧುಸೂದನ್ ಕೇವಲ 2-3 ವರ್ಷಗಳ ಹಿಂದಷ್ಟೇ ಇಲ್ಲೊಂದು ಡೂಪ್ಲೆಕ್ಸ್ ಮನೆ ಕಟ್ಟಿಕೊಂಡು ವಾಸವಾಗಿದ್ದರು, ಹೆಂಡತಿಯೊಂದಿಗೆ ಏರಿಯಾದಲ್ಲಿ ವಾಕ್ ಮಾಡುತ್ತಿದ್ದ ಮಧುಸೂದನ್ ಸ್ನೇಹಜೀವಿಯಾಗಿದ್ದರು ಎಂದು ಅವರ ನೆರೆಹೊರೆಯವರಾದ ಹಿರಿಯ ನಾಗರಿಕರೊಬ್ಬರು ಹೇಳುತ್ತಾರೆ.

ಇದನ್ನೂ ಓದಿ:  Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ