Video: ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಕುಟುಂಬದವರು ಔಷಧಿಯೊಂದಿಗೆ ಬಂದಾಗ ರೋಗಿಯೇ ಇರಲಿಲ್ಲ

Updated on: Feb 10, 2026 | 9:46 AM

ಲಲ್ಲು ಸಿಂಗ್ ಎಂಬುವವರಿಗೆ ಅಸ್ತಮಾ ಜೋರಾಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ರಾತ್ರಿ ಡ್ಯೂಟಿಯಲ್ಲಿದ್ದ ವೈದ್ಯ ಕುಡಿದ ಮತ್ತಿನಲ್ಲಿದ್ದರು, ರೋಗಿಯನ್ನು ಅಡ್ಮಿಟ್ ಮಾಡಬೇಕೆಂದು ಹೇಳಿ, ಒಂದಷ್ಟು ಔಷಧಿಗಳನ್ನು ತೂರಾಡುತ್ತಲೇ ಬರೆದುಕೊಟ್ಟಿದ್ದರು. ಆ ಔಷಧಿಯನ್ನು ತೆಗೆದುಕೊಂಡು ಆಸ್ಪತ್ರೆಗೆ ಬರುವಷ್ಟರಲ್ಲಿ ರೋಗಿಯೇ ಅಲ್ಲಿರಲಿಲ್ಲ, ಯಾವ ವಾರ್ಡ್​​ನಲ್ಲಿ ಅಡ್ಮಿಟ್ ಮಾಡಲಾಗಿದೆ ಎಂದು ಕೇಳಿದರೆ ಉತ್ತರ ಕೊಡುವ ಸ್ಥಿತಿಯಲ್ಲಿ ವೈದ್ಯರಿರಲಿಲ್ಲ ಇದನ್ನು ಕಂಡು ರೋಗಿಯ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಗುನಾ, ಫೆಬ್ರವರಿ 10: ಲಲ್ಲು ಸಿಂಗ್ ಎಂಬುವವರಿಗೆ ಅಸ್ತಮಾ ಜೋರಾಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಿದ್ದರು. ರಾತ್ರಿ ಡ್ಯೂಟಿಯಲ್ಲಿದ್ದ ವೈದ್ಯ ಕುಡಿದ ಮತ್ತಿನಲ್ಲಿದ್ದರು, ರೋಗಿಯನ್ನು ಅಡ್ಮಿಟ್ ಮಾಡಬೇಕೆಂದು ಹೇಳಿ, ಒಂದಷ್ಟು ಔಷಧಿಗಳನ್ನು ತೂರಾಡುತ್ತಲೇ ಬರೆದುಕೊಟ್ಟಿದ್ದರು. ಆ ಔಷಧಿಯನ್ನು ತೆಗೆದುಕೊಂಡು ಆಸ್ಪತ್ರೆಗೆ ಬರುವಷ್ಟರಲ್ಲಿ ರೋಗಿಯೇ ಅಲ್ಲಿರಲಿಲ್ಲ, ಯಾವ ವಾರ್ಡ್​​ನಲ್ಲಿ ಅಡ್ಮಿಟ್ ಮಾಡಲಾಗಿದೆ ಎಂದು ಕೇಳಿದರೆ ಉತ್ತರ ಕೊಡುವ ಸ್ಥಿತಿಯಲ್ಲಿ ವೈದ್ಯರಿರಲಿಲ್ಲ ಇದನ್ನು ಕಂಡು ರೋಗಿಯ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ರೋಗಿಯನ್ನು ದಾಖಲಿಸಿಕೊಂಡ ನಂತರ, ವೈದ್ಯರು ತಮ್ಮನ್ನು ಯಾವ ವಾರ್ಡ್‌ನಲ್ಲಿ ಇರಿಸಲಾಗಿತ್ತು ಎಂಬುದನ್ನು ಮರೆತಿದ್ದಾರೆ. ಸಣ್ಣ ಪ್ರಶ್ನೆಗೂ ಉತ್ತರ ಕೊಡಲು ವೈದ್ಯರು ಹೆಣಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಾರಗಳವರೆಗೆ ಅವರನ್ನು ಅಮಾನತು ಮಾಡಲಾಗಿದ್ದು, ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More