ಸರತಿ ಸಾಲು ಜಂಪ್ ಮಾಡಿ ಹಾಸನಾಂಬೆಯ ದರ್ಶನ ಪಡೆದ ಶಾಸಕ ಹೆಚ್ ಸಿ ಬಾಲಕೃಷ್ಣ ನಂತರ ಕ್ಷಮಿಸಿ ಅಂದರು!

ಸರತಿ ಸಾಲು ಜಂಪ್ ಮಾಡಿ ಹಾಸನಾಂಬೆಯ ದರ್ಶನ ಪಡೆದ ಶಾಸಕ ಹೆಚ್ ಸಿ ಬಾಲಕೃಷ್ಣ ನಂತರ ಕ್ಷಮಿಸಿ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2023 | 7:12 PM

ಬಾಲಕೃಷ್ಣರೊಂದಿಗೆ ಹಾಸನ ಜೆಡಿಎಸ್ ಶಾಸಕ ಹೆಚ್ ಪಿ ಸ್ವರೂಪ್ ಸಹ ಇದ್ದಾರೆ. ತಾನು ಸರತಿ ಸಾಲು ಜಂಪ್ ಮಾಡಿದ್ದು ಮಾಧ್ಯನಮದವರಿಗೆ ಗೊತ್ತಾಗಿದೆ ಅನ್ನೋದನ್ನು ಅರಿತ ಬಾಲಕೃಷ್ಣ ಕ್ಷಮೆ ಕೇಳುವ ನಾಟಕ ಮಾಡುತ್ತಾರೆ. ಸಾರಿ ಅಂದಾಕ್ಷಣ ಮಾಡಿದ ತಪ್ಪನ್ನು ಹಾಸನಾಂಬೆ ಕ್ಷಮಿಸುತ್ತಾಳೆಯೇ? ಅದನ್ನು ಶಾಸಕ ಬಾಲಕೃಷ್ಣ ಅವರೇ ಕನ್ನಡಿಗರಿಗೆ ಹೇಳಬೇಕು.

ಹಾಸನ: ಇದು ಭಂಡತನದ ಮತ್ತೊಂದು ಸ್ವರೂಪ ಇದ್ದೀತು! ನಮ್ಮ ನಾಯಕರು ಕೇವಲ ಸಮಾಜ ಮತ್ತು ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ ದೇವ ದೇವತೆಯರ ಸಮ್ಮುಖದಲ್ಲೂ ಗಣ್ಯರು! ಇಲ್ನೋಡಿ, ರಾಜ್ಯ ಆಡಳಿತ ಪಕ್ಷದ ಮಾಗಡಿ ಶಾಸಕ (Magadi Congress MLA) ಹೆಚ್ ಸಿ ಬಾಲಕೃಷ್ಣ (HC Balakrishna) ಇವತ್ತು ಹಾಸನಾಂಬೆಯ ದರ್ಶನಕ್ಕೆ (Hasanambe Darshan) ಆಗಮಿಸಿದ್ದರು. ಶಾಸಕ ಉಳಿದವರ ಹಾಗೆ ದೇವಿಯ ದರ್ಶನ ಮಾಡಿಕೊಂಡಿದ್ದರೆ ಪ್ರಾಯಶಃ ಇದನ್ನು ಬರೆಯುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಆದರೆ ಬಾಲಕೃಷ್ಣ ಬೇರೆ ಭಕ್ತರಂತೆ ಸಾಲಲ್ಲಿ ನಿಂತುಕೊಳ್ಳದೆ, ನೇರವಾಗಿ ಗುಡಿಯೊಳಗೆ ಹೋಗಿ ಹಾಸನಾಂಬೆ ದರ್ಶನ ಮಾಡಿಕೊಳ್ಳುತ್ತಾರೆ. ಅವರೊಂದಿಗೆ ಹಾಸನದ ಜೆಡಿಎಸ್ ಶಾಸಕ ಹೆಚ್ ಪಿ ಸ್ವರೂಪ್ ಸಹ ಇದ್ದಾರೆ. ತಾನು ಸರತಿ ಸಾಲು ಜಂಪ್ ಮಾಡಿದ್ದು ಮಾಧ್ಯನಮದವರಿಗೆ ಗೊತ್ತಾಗಿದೆ ಅನ್ನೋದನ್ನು ಅರಿತ ಬಾಲಕೃಷ್ಣ ಕ್ಷಮೆ ಕೇಳುವ ನಾಟಕ ಮಾಡುತ್ತಾರೆ. ಸಾರಿ ಅಂದಾಕ್ಷಣ ಮಾಡಿದ ತಪ್ಪನ್ನು ಹಾಸನಾಂಬೆ ಕ್ಷಮಿಸುತ್ತಾಳೆಯೇ? ಅದನ್ನು ಶಾಸಕ ಬಾಲಕೃಷ್ಣ ಅವರೇ ಕನ್ನಡಿಗರಿಗೆ ಹೇಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ