ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ

Updated on: Feb 16, 2026 | 3:14 PM

ಬೆಂಗಳೂರಿನ ಹಳೇಹಳ್ಳಿಯಲ್ಲಿ ದುಸ್ಥಿತಿಯ ರಸ್ತೆಗಳಿಂದಾಗಿ ಎರಡು ವರ್ಷದ ಮಗು ತ್ರಿಶೂಲ್ ಸಾವನ್ನಪ್ಪಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ಇದೇ ರಸ್ತೆಯಲ್ಲಿ ಸಂಭವಿಸಿದ ಐದನೇ ಸಾವೆಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು, ಫೆಬ್ರವರಿ 16: ಮಹದೇವಪುರದ ಕಿತ್ತಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಹಳ್ಳಿ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದ ಅಪಘಾತದಲ್ಲಿ ಎರಡು ವರ್ಷದ ಮಗು ತ್ರಿಶೂಲ್ ಸಾವನ್ನಪ್ಪಿದೆ. ರಸ್ತೆಯ ದುಸ್ಥಿತಿಯೇ ಮಗುವಿನ ಸಾವಿಗೆ ಕಾರಣವೆಂದು ಆರೋಪಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯವನ್ನು ಖಂಡಿಸಿ, ಗ್ರಾಮಸ್ಥರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಕಳೆದ ಐದಾರು ವರ್ಷಗಳಿಂದಲೂ ರಸ್ತೆಯ ಸ್ಥಿತಿ ಹೀಗೇ ಇದೆ. ಇದು ಈ ರಸ್ತೆಯಲ್ಲಿ ನಡೆದ ಐದನೇ ಸಾವು ಎಂದು ದೂರಿದ್ದಾರೆ. ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಪಿಡಿಒ ಭೇಟಿ ನೀಡದಿರುವುದು ಅವರ ಸಿಟ್ಟಿಗೆ ಮತ್ತಷ್ಟು ಕಾರಣವಾಗಿದೆ. ರಸ್ತೆ ಸರಿಪಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 16, 2026 03:12 PM