AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ಮಹಾರಾಷ್ಟ್ರದ ವೈದ್ಯರ ಅಮಾನತು

ಶವಾಗಾರದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ ಮಹಾರಾಷ್ಟ್ರದ ವೈದ್ಯರ ಅಮಾನತು

ಸುಷ್ಮಾ ಚಕ್ರೆ
|

Updated on: Oct 17, 2026 | 4:53 PM

Share

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡದ ಪ್ರತಿಷ್ಠಿತ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯರೊಬ್ಬರು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಆ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಪಿಂಪ್ರಿ-ಚಿಂಚ್‌ವಾಡ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸೇರಿದ ವೈಸಿಎಂ ಆಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ ಹಾಗೂ ಶವವನ್ನು ಪಡೆದುಕೊಳ್ಳಲು ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಕಾದು ಕುಳಿತಿದ್ದರು. ಆದರೆ ಒಳಗಡೆ ವೈದ್ಯರೊಬ್ಬರು ಟೇಬಲ್ ಮೇಲೆ ಮದ್ಯದ ಬಾಟಲಿಗಳು, ತಿಂಡಿ-ತಿನಿಸುಗಳನ್ನು ಇಟ್ಟುಕೊಂಡು ಆಲ್ಕೋಹಾಲ್ ಕುಡಿಯುವುದರಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ವೈದ್ಯ ಡಾ. ವೈಭವ್ ಅವಿನಾಶ್ಮ್ ಮಹಾಸ್ಕೆ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮುಂಬೈ, ಅಕ್ಟೋಬರ್ 17: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡದ ಪ್ರತಿಷ್ಠಿತ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯರೊಬ್ಬರು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಆ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಪಿಂಪ್ರಿ-ಚಿಂಚ್‌ವಾಡ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸೇರಿದ ವೈಸಿಎಂ ಆಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ ಹಾಗೂ ಶವವನ್ನು ಪಡೆದುಕೊಳ್ಳಲು ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಕಾದು ಕುಳಿತಿದ್ದರು. ಆದರೆ ಒಳಗಡೆ ವೈದ್ಯರೊಬ್ಬರು ಟೇಬಲ್ ಮೇಲೆ ಮದ್ಯದ ಬಾಟಲಿಗಳು, ತಿಂಡಿ-ತಿನಿಸುಗಳನ್ನು ಇಟ್ಟುಕೊಂಡು ಆಲ್ಕೋಹಾಲ್ ಕುಡಿಯುವುದರಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ವೈದ್ಯ ಡಾ. ವೈಭವ್ ಅವಿನಾಶ್ಮ್ ಮಹಾಸ್ಕೆ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More