ಆಲಮಟ್ಟಿ ಡ್ಯಾಂ ಎತ್ತರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ: ಬಸವರಾಜ ಬೊಮ್ಮಾಯಿ
ಮುಡಾ ಪ್ರಕರಣದ ತನಿಖೆ ಮಾಡಲು ಕರ್ನಾಟಕ ಸರ್ಕಾರ ರಚಿಸಿದ್ದ ದೇಸಾಯಿ ಆಯೋಗವು ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ನೀಡಿರುವ ಕ್ಲೀನ್ ಚಿಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಅದನ್ನು ನಿರೀಕ್ಷಿಸಲಾಗಿತ್ತು, ಅದರೆ ಪ್ರಕರಣದ ತನಿಖೆ ಇನ್ನೂ ಜಾರಿಯಲ್ಲಿದೆ, ಲೋಕಾಯುಕ್ತ ಸಲ್ಲಿಸುವ ರಿಪೋರ್ಟ್ ಆಧರಿಸಿ ನ್ಯಾಯಾಲಯ ತೀರ್ಪು ತೆಗೆದುಕೊಳ್ಳುತ್ತದೆ, ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯ ಮಧ್ಯೆಪ್ರವೇಶಿಸುವುದನ್ನು ಮಾತ್ರ ತಡೆದಿದೆ ಎಂದರು.
ದಕ್ಷಿಣ ಕನ್ನಡ, ಆಗಸ್ಟ್ 2: ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಮುಖ್ಯಮಂತ್ರಿ ಆಲಮಟ್ಟಿ ಜಲಾಶಯ ಅಣೆಕಟ್ಟನ್ನು 524 ಅಡಿಗೆ ಎತ್ತರಿಸುವುದಕ್ಕೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ಕ್ಯಾತೆ ತೆಗೆಯುತ್ತಿದ್ದಾರೆ, ಜಲಾಶಯ ನಿರ್ಮಾಣಗೊಳ್ಳುವ ಮೊದಲೇ ಸಾಂಗ್ಲೀ, ಕೊಲ್ಹಾಪುರ ಮತ್ತು ಇತರ ಕೆಲ ಪ್ರದೇಶಗಗಳಲ್ಲಿ ಪ್ರವಾಹಗಳಾಗುತ್ತಿದ್ದವು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ನಡೆಸಿದ ಸರ್ವೇ ವರದಿಯನ್ನೇ ಆಧಾರವಾಗಿಟ್ಟುಕೊಂಡು ಕೃಷ್ಣಾನದಿ ಜಲವಿವಾದಗಳ ನ್ಯಾಯಮಂಡಳಿ (KWDT) 2010ರಲ್ಲೇ ಆದೇಶ ವನ್ನು ನೀಡಿದೆ, ಟ್ರಿಬ್ಯೂನಲ್ ಆದೇಶವನ್ನು ಸರ್ವೋಚ್ಛ ನ್ಯಾಯಾಲಯದ ಡಿಕ್ರೀ ಅಂತ ಕರೆಯುತ್ತಾರೆ, ಅದೇಶವನ್ನು ಇದುವರೆಗೆ ಯಾರೂ ಚಾಲೆಂಜ್ ಮಾಡಿರದ ಕಾರಣ ಮಹಾರಾಷ್ಟ್ರದ ಕ್ಯಾತೆ ಅರ್ಥವಿಲ್ಲದ್ದು ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಶಿಗ್ಗಾವಿಯಲ್ಲಿ ಭಾಷಣ ಮಾಡುವಾಗ ಭಾವುಕರಾದ ಬಸವರಾಜ ಬೊಮ್ಮಾಯಿ ಕೊನೇವರೆಗೂ ನಿಮ್ಮ ಸೇವೆ ಮಾಡ್ತೀನಿ ಅಂದರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
