ಶಿಗ್ಗಾವಿಯಲ್ಲಿ ಭಾಷಣ ಮಾಡುವಾಗ ಭಾವುಕರಾದ ಬಸವರಾಜ ಬೊಮ್ಮಾಯಿ ಕೊನೇವರೆಗೂ ನಿಮ್ಮ ಸೇವೆ ಮಾಡ್ತೀನಿ ಅಂದರು!

ಶಿಗ್ಗಾವಿಯಲ್ಲಿ ಭಾಷಣ ಮಾಡುವಾಗ ಭಾವುಕರಾದ ಬಸವರಾಜ ಬೊಮ್ಮಾಯಿ ಕೊನೇವರೆಗೂ ನಿಮ್ಮ ಸೇವೆ ಮಾಡ್ತೀನಿ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2024 | 10:14 AM

ದಶಕಗಳಿಂದ ಕ್ಷೇತ್ರವನ್ನು ಒಬ್ಬ ಶಾಸಕನಾಗಿ ಪ್ರತಿನಿಧಿಸುತ್ತಿರುವ ಬೊಮ್ಮಾಯಿಗೆ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತು. ಅವರು ಜನರಿಗೆ ಅಪೀಲ್ ಮಾಡಿದ್ದು ಅದನ್ನೇ. ಸಂಸದನಾಗಿ ಅಯ್ಕೆಯಾದರೂ ನಿಮ್ಮನ್ನು ಬಿಟ್ಟು ದೂರ ಹೋಗಲ್ಲ, ಕೊನೆ ಉಸರಿರುವವರೆಗೆ ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಸೇವೆ ಮಾಡುತ್ತೇನೆ ಅಂತ ಗದ್ಗದಿತರಾಗಿ ಹೇಳಿದರು.

ಹಾವೇರಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬಿಜೆಪಿ ಹೈಕಮಾಂಡ್ ಹಾವೇರಿ ಲೋಕಸಭಾ ಕ್ಷೇತ್ರದ (Haveri Lok Sabha Seat) ಟಿಕೆಟ್ ನೀಡಿದೆ. ಬೊಮ್ಮಾಯಿಗೆ ಟಿಕೆಟ್ ಘೋಷಣೆಯಾದಾಗ ಆವರು ಶಾಸಕರಾಗಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ (Shiggaon Assembly constituency) ಜನ ಸಂಭ್ರಮಿಸಲಿಲ್ಲ. ಯಾಕೆಂದರೆ ಅವರಿಗೆ ಬೊಮ್ಮಾಯಿ ಒಬ್ಬ ಶಾಸಕರಾಗಿಯೇ ಬೇಕಿತ್ತು. ಅದು ಬೊಮ್ಮಾಯಿ ಅವರಿಗೂ ಚೆನ್ನಾಗಿ ಗೊತ್ತಿದೆ. ನಿನ್ನೆ ಸಾಯಂಕಾಲ ಶಿಗ್ಗಾವಿಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಬೊಮ್ಮಾಯಿ ಭಾವುಕರಾಗಿಬಿಟ್ಟರು. ಪ್ರಾಯಶಃ ಅವರಿಗೂ ಸಂಸದನಾಗೋದು ಬೇಕಿರಲಿಲ್ಲ. ದಶಕಗಳಿಂದ ಕ್ಷೇತ್ರವನ್ನು ಒಬ್ಬ ಶಾಸಕನಾಗಿ ಪ್ರತಿನಿಧಿಸುತ್ತಿರುವ ಬೊಮ್ಮಾಯಿಗೆ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತು. ಅವರು ಜನರಿಗೆ ಅಪೀಲ್ ಮಾಡಿದ್ದು ಅದನ್ನೇ. ಸಂಸದನಾಗಿ ಅಯ್ಕೆಯಾದರೂ ನಿಮ್ಮನ್ನು ಬಿಟ್ಟು ದೂರ ಹೋಗಲ್ಲ, ಕೊನೆ ಉಸರಿರುವವರೆಗೆ ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಸೇವೆ ಮಾಡುತ್ತೇನೆ ಅಂತ ಗದ್ಗದಿತರಾಗಿ ಹೇಳಿದರು. ಉಕ್ಕಿ ಬರುತ್ತಿದ್ದ ದುಃಖವನ್ನು ಬಹಳ ಕಷ್ಟಪಟ್ಟ ತಡೆಯುವ ಪ್ರಯತ್ನ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಬ್ಬದಲ್ಲೂ ಪಕ್ಷ ಸಂಘಟನೆ ಕೆಲಸ, ಬಸವರಾಜ ಬೊಮ್ಮಾಯಿ ಮನೆಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತುಕತೆ