ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ ದೇವಸ್ಥಾನ ಮುಳುಗಡೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಹಿಡಕಲ್ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಹಿನ್ನೀರಿನಲ್ಲಿರುವ ವಿಠ್ಠಲ ದೇವಸ್ಥಾನ ಮುಳುಗಡೆ.
ಬೆಳಗಾವಿ, ಜುಲೈ 23: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ (Maharashtra Rain) ಹಿನ್ನೆಲೆ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೆ, ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ (Hidkal reservoir) ಒಳ ಹರಿವು (30 ಸಾವಿರ ಕ್ಯೂಸೆಕ್) ಹೆಚ್ಚಾಗಿದೆ. ಪರಿಣಾಮ ಹುಕ್ಕೇರಿ ತಾಲೂಕಿನ ಹುನ್ನೂರು ಬಳಿಯ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ ದೇವಸ್ಥಾನ ಮುಳುಗಡೆಯಾಗಿದೆ. ಸದ್ಯ ದೇವಸ್ಥಾನದ ತುತ್ತ ತುದಿಯಲ್ಲಿರುವ ಕಳಶ ಮಾತ್ರ ಕಾಣಿಸುತ್ತಿದೆ. ಹಿಡಕಲ್ ಡ್ಯಾಂನಲ್ಲಿ ಕಳೆದ 5 ದಿನಗಳಲ್ಲಿ 17 ಟಿಎಂಸಿ ನೀರು ಸಂಗ್ರಹವಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos