Mahashivratri 2023: ಮಹಾಶಿವರಾತ್ರಿ ಜಾಗರಣೆ ಬಳಿಕ ಬೆಂಗಳೂರು ಗವಿ ಗಂಗಾಧರೇಶ್ವರ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರು
Mahashivratri: ಮಹಾಶಿವರಾತ್ರಿ ನಿಮಿತ್ತ ನಗರದ ಇತಿಹಾಸ ಪ್ರಸಿದ್ಧ ಗವಿಪುರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತರು ರಾತ್ರಿವಿಡಿ ಜಾಗರಣೆ ಮಾಡಿದರು. ನಸುಕಿನ ಜಾವದಿಂದಲೇ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಭಕ್ತರು ದರ್ಶನ ಆಗಮಿಸಿದ್ದಾರೆ.
ಬೆಂಗಳೂರು: ಮಹಾಶಿವರಾತ್ರಿ (Mahashivratri) ನಿಮಿತ್ತ ನಗರದ ಇತಿಹಾಸ ಪ್ರಸಿದ್ಧ ಗವಿಪುರದ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತರು ರಾತ್ರಿವಿಡಿ ಜಾಗರಣೆ ಮಾಡಿದರು. ನಸುಕಿನ ಜಾವದಿಂದಲೇ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಭಕ್ತರು ದರ್ಶನ ಆಗಮಿಸಿದ್ದಾರೆ. ನಿನ್ನೆ (ಫೆ.18) ಬೆಳಿಗ್ಗೆಯಿಂದಲೇ ಶಿವನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ನೆರವೇರುತ್ತಿದೆ. ಇಂದು (ಫೆ.19) ಸೂರ್ಯೋದಯ ನಂತರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಇಡೀ ರಾತ್ರಿ ಜಾಗರಣೆ ನಂತರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
Published on: Feb 19, 2023 08:30 AM