71019 ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳದ ರೈತರು; ರಾಯಚೂರು ಜಿಲ್ಲೆಯಾದ್ಯಂತ ಭರ್ಜರಿ ಫಸಲು

| Updated By: preethi shettigar

Updated on: Feb 01, 2022 | 8:28 AM

ಈ ಬಾರಿ ರಾಯಚೂರು ಜಿಲ್ಲೆಯಾದ್ಯಂತ ಒಟ್ಟು 71 ಸಾವಿರ ಹೆಕ್ಟರ್​ನಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆಯಿದೆ. ಬಿಳಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್​ಗೆ 3500 ಇದೆ. ಹೈಬ್ರಿಡ್ ಜೋಳಕ್ಕೆ 1600 ಇದೆ.

ರಾಯಚೂರು: ಬರೀ ಮಳೆ, ನೆರೆ ಹಾವಳಿ ಎಂದು ಕಂಗಾಲಾಗಿದ್ದ ರೈತರ(Farmer) ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಪ್ರಕೃತಿ ವಿಕೋಪದ ಮಧ್ಯೆಯೂ ಈ ಬಾರಿ ಭರ್ಜರಿ ಬೆಳೆ ಬಂದಿದ್ದು, ರೈತರ ಕಣ್ಣೀರು ಕರಗುವ ಲಕ್ಷಣಗಳು ಮೂಡಿವೆ. ಇದಕ್ಕೆ ಭರ್ಜರಿಯಾಗಿ ಬೆಳೆದು ನಿಂತಿರುವ ಮೆಕ್ಕೆಜೋಳ(Maize) ಕಾರಣವಾಗಿದೆ. ರಾಯಚೂರು ಜಿಲ್ಲೆಯಾದ್ಯಂತ ಪ್ರಸಕ್ತ ಹಂಗಾಮಿಗೆ ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದೆ. ಇದರಿಂದ ಜಿಲ್ಲೆಯಾದ್ಯಂತ ಜೋಳ ಬೆಳೆದಿರ ರೈತರ ಮೊಗದಲ್ಲಿ ಸಂತಸ ಕಳೆಗಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ(Rain) ಬೆಳೆ ನೀರಿನಿಂದ ಜಲಾವೃತವಾಗಿ ಹಾಳಾಗಿತ್ತು. ಜೊತೆಗೆ ಕೀಟಬಾಧೆಯಿಂದ ಬೆಳೆ ಹಾಳಾಗಿತ್ತು. ಆದರೀಗ ಜಿಲ್ಲೆಯಾದ್ಯಂತ ಮೆಕ್ಕೆಜೋಳ ಭರ್ಜರಿಯಾಗಿ ಬೆಳೆದಿದ್ದು, ರೈತರಿಗೆ ಈ ಬಾರಿ ಉತ್ತಮ ಆದಾಯ ತಂದು ಕೊಡುವ ನೀರಿಕ್ಷೆಯಿದೆ.

ಈ ಬಾರಿ ರಾಯಚೂರು ಜಿಲ್ಲೆಯಾದ್ಯಂತ ಒಟ್ಟು 71 ಸಾವಿರ ಹೆಕ್ಟರ್​ನಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಬೆಲೆಯಿದೆ. ಬಿಳಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್​ಗೆ 3500 ಇದೆ. ಹೈಬ್ರಿಡ್ ಜೋಳಕ್ಕೆ 1600 ಇದೆ. ಜಿಲ್ಲೆಯಾದ್ಯಂತ ರೈತರು ಹೆಚ್ಚಾಗಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆದಿದ್ದಾರೆ. ಮೆಕ್ಕೆಜೋಳವನ್ನು ಕಡಿಮೆ ಪ್ರಮಾಣದಲ್ಲಿ ಬೆಳೆದಿರೊದ್ರಿಂದಲೂ ರೈತರಿಗೆ ಅನುಕೂಲಕರವಾಗಿದೆ. ಅಲ್ಲದೇ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವುದರಿಂದ ಈ ಬಾರಿ ಮೆಕ್ಕೆಜೋಳ ಬೆಳೆದ ರೈತರಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ:
ಗದಗದಲ್ಲಿ ಆರ್​ಸಿಸಿ ನಿರ್ಮಾಣ ಕಂಪನಿ ವಿರುದ್ಧ ರೈತರ ಆಕ್ರೋಶ! ಕ್ರಷರ್ ಧೂಳಿಗೆ ಬೆಳೆ ನಾಶ

ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿ 15 ದಿನಗಳಾದರೂ ಇನ್ನೂ ಮೊಳಕೆ ಒಡೆದಿಲ್ಲ; ಧಾರವಾಡ ರೈತರಲ್ಲಿ ಹೆಚ್ಚಿದ ಆತಂಕ

Follow us on