‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗುವಿನ ಅಲೆ

Updated on: Jan 26, 2025 | 3:41 PM

‘ಮಜಾ ಟಾಕೀಸ್’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಶೋ ಆರಂಭ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಬಾರಿ ಕಳೆದ ಸೀಸನ್​ಗಿಂತ ಹೆಚ್ಚಿನವರು ತಂಡದಲ್ಲಿ ಇದ್ದಾರೆ. ಯೋಗರಾಜ್ ಭಟ್ ಕೂಡ ಈ ಬಾರಿ ತಂಡದಲ್ಲಿ ಇದ್ದಾರೆ ಎನ್ನುವುದು ವಿಶೇಷ.

‘ಮಜಾ ಟಾಕೀಸ್’ನಲ್ಲಿ ಡಬಲ್ ಮೀನಿಂಗ್ ಡೈಲಾಗ್​ಗಳು ಸಾಮಾನ್ಯ. ಈ ಬಾರಿ ಅದು ಸ್ವಲ್ಪ ಹೆಚ್ಚೇ ಇರುವ ಸೂಚನೆ ಸಿಕ್ಕಿದೆ. ಕುರಿ ಪ್ರತಾಪ್ ಹಾಗೂ ಯೋಗರಾಜ್ ಭಟ್ ಒಟ್ಟಿಗೆ ಸೇರಿರುವುದರಿಂದ ಮಜ ಸ್ವಲ್ಪ ಹೆಚ್ಚೇ ಸಿಗುವ ನಿರೀಕ್ಷೆ ಇದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಶೋ ಆರಂಭ ಆಗಲಿದೆ. ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More