Loading video

ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ

|

Updated on: Mar 13, 2025 | 8:26 AM

ಮಜಾ ಟಾಕೀಸ್​ನಲ್ಲಿ ಪ್ರತಿ ವಾರ ಬೇರೆ ಬೇರೆ ಕಲಾವಿದರ ಎಂಟ್ರಿ ಆಗುತ್ತದೆ. ಕಳೆದ ವಾರ ಹಿರಿಯ ನಟಿಯರು ಆಗಮಿಸಿದ್ದರು. ಈ ವಾರ ಯುವ ನಟಿಯರ ಆಗಮನ ಆಗಿದೆ. ಮೋಜು ಮಸ್ತಿಯೊಂದಿಗೆ ಮಜಾ ಟಾಕೀಸ್ ಕಾರ್ಯಕ್ರಮ ನಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಮಜಾ ಟಾಕೀಸ್’ ಕಾರ್ಯಕ್ರಮ ವಾರದಿಂದ ವಾರಕ್ಕೆ ರಂಗೇರುತ್ತಿದೆ. ಪ್ರತಿ ವಾರ ಹೊಸ ಹೊಸ ಕಲಾವಿದರು ಅತಿಥಿಗಳಾಗಿ ಆಗಮಿಸುತ್ತಾ ಇದ್ದಾರೆ. ಈ ಬಾರಿ ಮಜಾ ಟಾಕೀಸ್ ವೇದಿಕೆ ಮೇಲೆ ಮಾನ್ವಿತಾ, ಶಾನ್ವಿ, ಶರಣ್ಯಾ ಆಗಮಿಸಿದ್ದಾರೆ. ಈ ಎಪಿಸೋಡ್ ಸಖತ್ ಫನ್ ಇಂದ ಕೂಡಿತ್ತು. ಕುರಿ ಪ್ರತಾಪ್ ಅವರ ಕಾಲನ್ನು ಶಾನ್ವಿ ಎಳೆದಿದ್ದಾರೆ. ‘ಕುರಿ ನಿಂಗೆ ಸಖತ್ ಬೇಡಿಕೆ. ಶಿವಾಜಿ ನಗರಕ್ಕೆ ಹೋದರೆ ನಿನ್ನ ಬಿಡೋದಿಲ್ಲ’ ಎಂದು ಶಾನ್ವಿ. ಈ ವಿಡಿಯೋ ಸಖತ್ ಫನ್ ಆಗಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.