ವೇಗವಾಗಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಆಕ್ಸಲ್ ಕಟ್: ಬೆಚ್ಚಿ ಬೀಳಿಸುವಂತಿದೆ ಸಿಸಿಟಿವಿ ವಿಡಿಯೋ, ತಪ್ಪಿದ ಭಾರಿ ಅನಾಹುತ

Updated By: Ganapathi Sharma

Updated on: Oct 07, 2025 | 8:02 AM

ಸಂಭಾವ್ಯ ಭಾರೀ ಅನಾಹುತವೊಂದು ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದೆ. ವೇಗವಾಗ ಸಾಗುತ್ತಿದ್ದಾಗಲೇ ಕೆಎಸ್​ಆರ್​ಟಿಸಿ ಬಸ್‌ನ ಆಕ್ಸಲ್ ಕಟ್ ಆಗಿದೆ. ಇದರಿಂದಾಗಿ ಬಸ್ ಮೇಲಕ್ಕೆ ಜಿಗಿದು ಗಿರ್ರನೇ ತಿರುಗಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ನಿಂತಿದೆ. ಕೆಎಸ್​ಆರ್​ಟಿಸಿ ಬಸ್‌ ಅಪಘಾತದ ಸಿಸಿಟಿವಿ ವಿಡಿಯೋ ಇಲ್ಲಿದೆ.

ಚಿಕ್ಕಮಗಳೂರು, ಅಕ್ಟೋಬರ್ 7: ವೇಗವಾಗಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್‌ನ ಆಕ್ಸಲ್ ಕಟ್ ಆಗಿ ಬಸ್ ನಾಲ್ಕು ಅಡಿ ಎತ್ತರಕ್ಕೆ ನೆಗೆದ ಘಟನೆ ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ನಡೆದಿದೆ. ಆಕ್ಸಲ್ ಕಟ್ ಆಗುತ್ತಿದ್ದಂತೆಯೇ ಮೇಲಕ್ಕೆ ಹಾರಿದ ಬಸ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತಿರುಗಿ‌ ನಿಂತಿದೆ. ಅದೃಷ್ಟವಶಾತ್, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ ನಿಯಂತ್ರಣಕ್ಕೆ ಬಂದಿದ್ದು ಭಾರಿ ಅನಾಹುತ ತಪ್ಪಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Oct 07, 2025 07:59 AM