ಅಬ್ಬರದ ಎಕೆ-47 ಮಶೀನ್ ಗನ್ ತಯಾರಿಸುತ್ತಿದ್ದ ಕಲಾಷ್ನಿಕೋವ್ ಕಂಪನಿ ಸದ್ದಿಲ್ಲದೆ ಇಲೆಕ್ಟ್ರಿಕ್ ಕಾರು ತಯಾರಿಸುತ್ತಿದೆ!

| Updated By: shivaprasad.hs

Updated on: Dec 11, 2021 | 10:23 AM

ರಷ್ಯಾದಿಂದ ನಮಗೆ ಲಭ್ಯವಾಗಿರುವ ಮಾಹಿತಿಯು ಕಲಾಷ್ನಿಕೋವ್ ಕಂಪನಿಯು ಯುವಿ-4 ಪೇಟೆಂಟ್​ಗಾಗಿ ಆ ದೇಶದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ಎಕೆ-47 ರೈಫಲ್ ಹೆಸರು ಕೇಳದವರು ಯಾರಾದಾರೂ ಇದ್ದಾರೆಯೇ? ಸಾಧ್ಯವೇ ಇಲ್ಲ. ಆ ಹೆಸರಲ್ಲಿ ಸಿನಿಮಾಗಳು ಬಂದವು, ಅದನ್ನು ತಮ್ಮ ಜೊತೆ ಇಟ್ಟುಕೊಂಡವರು ಮತ್ತು ಅಂಥವರನ್ನು ಮನೆಯಲ್ಲಿಟ್ಟುಕೊಂಡವರು ಜೈಲು ಕಂಬಿ ಎಣಿಸಿದ ಕತೆಗಳು ನಮಗೆ ಚೆನ್ನಾಗಿ ಗೊತ್ತಿವೆ. ರಷ್ಯಾ ಮೂಲದ ಕಲಾಷ್ನಿಕೋವ್ ಕಂಪನಿಯು ಎಕೆ-47 ಗನ್​ಗಳನ್ನು ತಯಾರಿಸುತ್ತದೆ. ಈ ಗನ್​ಗೆ ಕಲ್ಟ್ ಸ್ಟೇಟಸ್ ಇದೆ ಅಂದರೆ ಅದೆಷ್ಟು ಫೇಮಸ್ ಅಂತ ನೀವೇ ಅಂದಾಜು ಮಾಡಿಕೊಳ್ಳಿ. ಅದರೆ, ಸುಮಾರು ಮೂರು ವರ್ಷಗಳ ಹಿಂದೆ ಗನ್ ತಯಾರಿಸುವ ಕಲಾಷ್ನಿಕೋವ್ ಕಂಪನಿಯು ಎಲೆಕ್ಟ್ರಿಕ್ ವಾಹನನಗಳನ್ನು ತಯಾರಿಸಲಾರಂಭಿಸಿ ಸಿವಿ-1 ಹೆಸರುಳ್ಳ ಕಾರಿನ ಪರಿಕಲ್ಪನೆಯನ್ನು ಬಿಡುಗಡೆ ಮಾಡಿದ್ದು ಬಹಳ ಜನರಿಗೆ ಗೊತ್ತಿದ್ದಂತಿಲ್ಲ. ಅದಾದ ಮೇಲೆ ಕಲಾಷ್ನಿಕೋವ್ ನಾಲ್ಕು ಡೋರಿನ ಐ ಜೆಡ್ ಎಚ್ ಯುವಿ-4 ಇಲೆಕ್ಟ್ರಿಕ್ ಕಾರಿನ ವಿನ್ಯಾಸವನ್ನು ಅಭಿವೃದ್ಧಿಪಡಿಸಿ ಕಾರುಗಳ ಉತ್ಪಾದನೆಯಲ್ಲಿ ತೊಡಗಿರುವುದು ಸಹ ಕೆಲವರಿಗಷ್ಟೇ ಗೊತ್ತಿದೆ.

ರಷ್ಯಾದಿಂದ ನಮಗೆ ಲಭ್ಯವಾಗಿರುವ ಮಾಹಿತಿಯು ಕಲಾಷ್ನಿಕೋವ್ ಕಂಪನಿಯು ಯುವಿ-4 ಪೇಟೆಂಟ್​ಗಾಗಿ ಆ ದೇಶದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ಹಾಗೆ ನೋಡಿದರೆ ರಷ್ಯಾದ ಎಲೆಕ್ಟ್ರಿಕ್ ವಾಹನಗಳ ಮಾರ್ಕೆಟ್ ನಲ್ಲಿ ವಿದೇಶಿ ಮೂಲದ ವಾಹನಗಳ ಕಾರುಬಾರೇ ಜೋರಾಗಿದೆ. ಅಲ್ಲಿನ ರಸ್ತೆಗಳ ಮೇಲೆ ಅಮೆರಿಕದ ಟೆಸ್ಲಾ, ಯುರೋಪಿಯನ್ ಬ್ರ್ಯಾಂಡ್ಗಳಾದ ಮರ್ಸಿಡಿಸ್, ವೊಕ್ಸ್​ವ್ಯಾಗನ್ ಮತ್ತು ರಿನಾಲ್ಟ್, ದಕ್ಷಿಣ ಕೊರಿಯಾದ ಹ್ಯುಂಡೈ ಮತ್ತು ಚೀನಾದ ಹಲವಾರು ಬ್ರ್ಯಾಂಡ್​ಗಳು ಕಾಣಿಸುತ್ತವೆ. ಈ ಹಿನ್ನೆಲೆಯಲ್ಲಿ ರಷ್ಯನ್ನರಿಗೆ ಸ್ವದೇಶಿ ಮೂಲದ ಕಾರು ಅಂತ ಹೇಳಿಕೊಳ್ಳಲು ಕಲಾಷ್ನಿಕೋವ್ ಕಂಪನಿಯ ಯುವಿ-4 ಕಾರು ದೊರಕಿದೆ.

ಕಲಾಷ್ನಿಕೋವ್ ಯುವಿ-4; 3.4 ಮೀಟರ್ ಉದ್ದ, 1.5 ಮೀಟರ್ ಆಗಲ ಮತ್ತು 1.7 ಮೀಟರ್ ಎತ್ತರವಿದೆ. ನಗರ ಪ್ರದೇಶಗಳಲ್ಲಿ ತಿರುಗಾಡಲು ಈ ಕಾರು ಹೇಳಿಮಾಡಿಸಿದಂತಿದೆ. ಹಾಗೆಯೇ, ಬಹಳ ಹಗುರವಾಗಿರುವ ಈ ಕಾರು ಒಮ್ಮೆ ರೀಚಾರ್ಜ್ ಮಾಡಿದರೆ 150 ಕಿಮೀಗಳ ಅಂತರವನ್ನು ಕ್ರಮಿಸಲಿದೆ.

ಇದನ್ನೂ ಓದಿ:   Viral Video: ಮ್ಯಾಜಿಕ್ ಕಾರ್ಪೆಟ್ ಮೇಲೆ ತೇಲಿ ಮಂತ್ರಮುಗ್ಧಗೊಳಿಸಿದ ಜಾದೂಗಾರ; ಶಾಕಿಂಗ್ ವಿಡಿಯೋ ಇಲ್ಲಿದೆ