ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: 35 ದಿನಗಳಲ್ಲಿ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ

Edited By:

Updated on: Apr 17, 2025 | 7:54 AM

ಇದೇ ವರ್ಷದ ಫೆಬ್ರವರಿಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ ನಡೆದ್ದು, 1.94 ಕೋಟಿ ರೂ. ದೊರೆತಿತ್ತು. ಇದೀಗ ಮತ್ತೆ ಹುಂಡಿ ಎಣಿಕೆ ನಡೆದಿದ್ದು, ಕೇವಲ 35 ದಿನಗಳಲ್ಲಿ ಮಾದಪ್ಪ ಕೋಟ್ಯಧಿಪತಿಯಾಗಿದ್ದಾನೆ. ವಿಡಿಯೋ ಇಲ್ಲಿದೆ.

ಚಾಮರಾಜನಗರ, ಏಪ್ರಿಲ್ 17: ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಕಳೆದ 35 ದಿನಗಳ ಅವಧಿಯಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. 3.26 ಕೋಟಿ ರೂ. ನಗದು ಸಂಗ್ರಹವಾಗಿದೆ. 47 ಗ್ರಾಂ ಚಿನ್ನ, 2 ಕೆಜಿ 200 ಗ್ರಾಂ ಬೆಳ್ಳಿ ದೊರೆತಿದೆ. ಮಾದಪ್ಪನ ಹುಂಡಿಯಲ್ಲಿ‌ 11 ವಿದೇಶಿ ನೋಟುಗಳು ಪತ್ತೆಯಾಗಿವೆ. ಎರಡು ಸಾವಿರ ಮುಖಬೆಲೆಯ 20 ನೋಟುಗಳೂ ದೊರೆತಿವೆ.‌ ಸಾಲೂರು ಶ್ರೀಗಳ ನೇತೃತ್ವದಲ್ಲಿ ಹುಂಡಿ ಎಣಿಕಾ ಕಾರ್ಯ ನಡೆಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ